Advertisement

ಫ‌ುಟ್ಬಾಲ್‌ ಶೈಲಿಯಲ್ಲಿ ಟೆಸ್ಟ್‌,ಏಕದಿನ ಲೀಗ್‌ಗೆ ಐಸಿಸಿ ಸಜ್ಜು: ವರದಿ

11:39 AM Feb 04, 2017 | Team Udayavani |

ದುಬಾಯಿ : ಫ‌ುಟ್ಬಾಲ್‌ ಮಾದರಿಯಲ್ಲಿ  ಏಕದಿನ ಅಂತಾರಾಷ್ಟ್ರೀಯ ಮತ್ತು ಟೆಸ್ಟ್‌ ಪಂದ್ಯಗಳ ಸ್ವರೂಪ ಮಹತ್ತರ ಬದಲಾವಣೆಗಳನ್ನು ಕಾಣಲಿವೆ; ಅಫ್ಘಾನಿಸ್ಥಾನ ಮತ್ತು ಅಯರ್ಲಂಡ್‌ ಗೆ ಟೆಸ್ಟ್‌ ಕ್ರಿಕೆಟ್‌ ಸ್ಥಾನಮಾನ ಲಭಿಸಲಿದೆ ಎಂದು ವರದಿಗಳು ತಿಳಿಸಿವೆ. 

Advertisement

ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಎರಡು ವರ್ಷಗಳ ಟೆಸ್ಟ್‌ ಲೀಗ್‌, 13 ತಂಡಗಳ ಏಕದಿನ ಲೀಗ್‌ ಮತ್ತು ವಿಶ್ವ ಟ್ವೆಂಟಿ – ಟ್ವೆಂಟಿಗೆ ಪ್ರಾದೇಶಿಕ ಅರ್ಹತೆ ಮೊದಲಾದ ಕ್ರಾಂತಿಕಾರಕ ಬದಲಾವಣೆ ತರುವುದನ್ನು ಪ್ರಸ್ತಾವಿಸಲಾಗಿದೆ.

ಐಸಿಸಿ ಮಂಡಳಿ ಈ ಪ್ರಸ್ತಾವಗಳಿಗೆ ಅನುಮೋದನೆ ನೀಡಿದಲ್ಲಿ, 2019ರಿಂದಲೇ 9-3ರ ನಮೂನೆಯಲ್ಲಿ  ಎರಡು ವರ್ಷಗಳ ಆವರ್ತನ ಟೆಸ್ಟ್‌ ಲೀಗ್‌ ಆರಂಭಗೊಳ್ಳಲಿದೆ. 

ಈ ನೂತನ ಪ್ರಸ್ತಾವಗಳ ಪ್ರಕಾರ ಟೆಸ್ಟ್‌ ಆಡುತ್ತಿರುವ ಉನ್ನತ 9 ದೇಶಗಳು ತಮ್ಮೊಳಗೆ ಮಾತ್ರವಲ್ಲದೆ ಮೂರು ಕೆಳ ಕ್ರಮಾಂಕದ ತಂಡಗಳೊಂದಿಗೆ ಆಡಲಿವೆ. 

ಮೂರು ವರ್ಷಗಳ – 13 ತಂಡಗಳ – ಒನ್‌ಡೇ ಲೀಗ್‌ ಹಾಗೂ ಅಂತಿಮವಾಗಿ 50 ಓವರ್‌ಗಳ ವಿಶ್ವ ಏಕದಿನ ಕ್ರಿಕೆಟ್‌ ಕ್ರಮವನ್ನು ಜಾರಿಗೆ ತರುವುದಕ್ಕೆ ಸಿಇಸಿ ಅನುಮೋದನೆ ನೀಡಿರುವುದಾಗಿ ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next