Advertisement

ಟೆಸ್ಟ್‌  ಬ್ಯಾಟ್ಸ್‌ಮನ್‌ಗಳಿಗೆಲ್ಲ ಐಸಿಸಿಯಿಂದ ನಂ.1 ಶ್ರೇಯಾಂಕ!

06:00 AM Aug 16, 2018 | Team Udayavani |

ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ಐಸಿಸಿ ಒಂದು ತಮಾಷೆ ಮಾಡಿದೆ. ಅದು ಸ್ವಲ್ಪ ಕಾಲ ತನ್ನ ಎಲ್ಲ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳನ್ನು ನಂ.1 ಎಂದು ಘೋಷಿಸಿತು. ಈ ಬಗ್ಗೆ ಒಂದಷ್ಟು ಅಚ್ಚರಿ, ತಮಾಷೆಗಳೆಲ್ಲ ವ್ಯಕ್ತವಾದ ಅನಂತರ ಮತ್ತೆ ಸಹಜ ಶ್ರೇಯಾಂಕ ಪ್ರಕಟಿಸಿದೆ! ಇದಕ್ಕೆ ಕಾರಣ, ಅಮೆರಿಕದ ಪಾಪ್‌ ಹಾಡುಗಾರ ಕೇನ್ಯೆ ವೆಸ್ಟ್‌. ಅವರು ಮಾಡಿದ್ದ ಟ್ವೀಟ್‌. ಅವರು ಟ್ವೀಟ್‌ ಒಂದರಲ್ಲಿ “ಯಾರೂ ಯಾರಿಗಿಂತ ಶ್ರೇಷ್ಠರಲ್ಲ’ ಎಂದಿದ್ದರು. ಇದು ಬಹಳ ಚರ್ಚೆಗೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಐಸಿಸಿ ಎಲ್ಲ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳನ್ನೂ ನಂ.1 ಎಂದು ಘೋಷಿಸಿತು! ಇದರಂತೆ ಅಗ್ರಸ್ಥಾನದಲ್ಲಿದ್ದ ಸ್ಟೀವ್‌ ಸ್ಮಿತ್‌, ದ್ವಿತೀಯ ಸ್ಥಾನದಲ್ಲಿದ್ದ ವಿರಾಟ್‌ ಕೊಹ್ಲಿ, ಅನಂತರದ ಸ್ಥಾನದಲ್ಲಿರುವ ಆಟಗಾರರೆಲ್ಲರೂ ನಂ.1 ಆದರು. 

Advertisement

ವಾಸ್ತವವಾಗಿ ಇಂಗ್ಲೆಂಡ್‌ ವಿರುದ್ಧದ ಮೊದಲನೇ ಟೆಸ್ಟ್‌ ಮುಗಿದ ಅನಂತರ ವಿರಾಟ್‌ ಕೊಹ್ಲಿ ನಂ.1 ಸ್ಥಾನಕ್ಕೇರಿದ್ದರು. ದ್ವಿತೀಯ ಟೆಸ್ಟ್‌ ಮುಗಿಯುತ್ತಿದ್ದಂತೆ ನಂ.1 ಸ್ಥಾನ ಕಳೆದುಕೊಂಡರು. ಆಸ್ಟ್ರೇಲಿಯದ ನಿಷೇಧಿತ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಮರಳಿ ಅಗ್ರಸ್ಥಾನ ಅಲಂಕರಿಸಿದರು. ಸ್ಮಿತ್‌ ನಿಷೇಧಕ್ಕೊಳಗಾಗಿದ್ದರೂ   ಈ ಯಾದಿಯಲ್ಲಿ ಕಾಣಿಸಿಕೊಳ್ಳುತ್ತಿರುವುದೇ ರ್‍ಯಾಂಕಿಂಗ್‌ನ ಬೃಹದಚ್ಚರಿ! 

Advertisement

Udayavani is now on Telegram. Click here to join our channel and stay updated with the latest news.

Next