Advertisement

ಟೆಸ್ಟ್‌ ಶ್ರೇಯಾಂಕ: ರವೀಂದ್ರಜಡೇಜ ನಂ.1 ಬೌಲರ್‌

12:14 PM Aug 02, 2017 | |

ದುಬೈ: ನೂತನ ಐಸಿಸಿ ಟೆಸ್ಟ್‌ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದೆ. ಬೌಲಿಂಗ್‌ ವಿಭಾಗದಲ್ಲಿ ಭಾರತೀಯ ಸ್ಪಿನ್ನರ್‌ ರವೀಂದ್ರ ಜಡೇಜ ನಂ.1ನೇ ಶ್ರೇಯಾಂಕ ಕಾಯ್ದುಕೊಂಡಿದ್ದಾರೆ. ಬ್ಯಾಟಿಂಗ್‌ ವಿಭಾಗದಲ್ಲಿ ವಿರಾಟ್‌ ಕೊಹ್ಲಿ 5ನೇ, ಚೇತೇಶ್ವರ ಪೂಜಾರ 4ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಸ್ಪಿನ್ನರ್‌ ಜಡೇಜ ಒಟ್ಟು 897 ಅಂಕವನ್ನು ಹೊಂದಿದ್ದಾರೆ. ಭಾರತದ ಮತ್ತೂಬ್ಬ ಸ್ಪಿನ್ನರ್‌ ಆರ್‌.ಅಶ್ವಿ‌ನ್‌ 849 ಅಂಕವನ್ನು ಹೊಂದಿದ್ದು, ನಂ.2ನೇ ಸ್ಥಾನ ಕಾಯ್ದು  ಕೊಂಡಿದ್ದಾರೆ.

Advertisement

5ನೇ ಸ್ಥಾನದಲ್ಲಿ ಕೊಹ್ಲಿ: ಭಾರತ ತಂಡದ ಯಶಸ್ವಿ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಲಂಕಾ ವಿರುದ್ಧ ಶತಕ ಸಿಡಿಸಿದರೂ ಅವರ ಶ್ರೇಯಾಂಕದಲ್ಲಿ ಏರಿಕೆಯಾಗಿಲ್ಲ. 826 ಅಂಕವನ್ನು ಹೊಂದಿದ್ದು, ನಂ.5ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಪೂಜಾರ 866 ಅಂಕವನ್ನು ಹೊಂದಿದ್ದು, 4ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾದ ಸ್ಟೀವನ್‌ ಸ್ಪಿನ್‌ ನಂ.1ನೇ ಸ್ಥಾನ ಕಾಯ್ದು  ಕೊಂಡಿದ್ದಾರೆ. ಇಂಗ್ಲೆಂಡ್‌ ಜೋ ರೂಟ್‌ ನಂ.2ನೇ ಸ್ಥಾನಕ್ಕೇರಿದ್ದರೆ, ನ್ಯೂಜಿಲೆಂಡ್‌ ನ ಕೇನ್‌ ವಿಲಿಯಮ್ಸನ್‌ ನಂ.3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಆಲ್‌ರೌಂಡರ್‌ ವಿಭಾಗದಲ್ಲಿ ಬಾಂಗ್ಲಾದ ಶಕೀಬ್‌ ಅಲ್‌ ಹಸನ್‌, ರವೀಂದ್ರ ಜಡೇಜ, ಆರ್‌.ಅಶ್ವಿ‌ನ್‌ ಕ್ರಮವಾಗಿ ಮೂರು ಸ್ಥಾನ ಕಾಯ್ದು ಕೊಂಡಿದ್ದಾರೆ. ತಂಡದ ವಿಭಾಗದಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ತಂಡಗಳು ಕ್ರಮವಾಗಿ ಮೊದಲ 5 ಸ್ಥಾನವನ್ನು
ಕಾಯ್ದುಕೊಂಡಿವೆ. ಇಂಗ್ಲೆಂಡ್‌ನ‌ ಆಲ್‌ ರೌಂಡರ್‌ ಬೆನ್‌ ಸ್ಟೋಕ್ಸ್‌ ಬ್ಯಾಟಿಂಗ್‌ ವಿಭಾಗದಲ್ಲಿ 25ನೇ ಸ್ಥಾನ, ಬೌಲಿಂಗ್‌ ವಿಭಾಗದಲ್ಲಿ 19ನೇ ಸ್ಥಾನಕ್ಕೇರಿದ್ದಾರೆ. ಇದು ಸ್ಟೋಕ್ಸ್‌ ಅವರ ಜೀವನ ಶ್ರೇಷ್ಠ ಸಾಧನೆಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next