Advertisement

ICC Rankings: ಜೆಮಿಮಾ ರೋಡ್ರಿಗಸ್‌ ಈಗ ಟಾಪ್‌-20

11:01 PM Jan 14, 2025 | Team Udayavani |

ದುಬಾೖ: ಏಳು ವರ್ಷಗಳ ಕಾಯುವಿಕೆ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿದ ಜೆಮಿಮಾ ರೋಡ್ರಿಗಸ್‌, ನೂತನ ಐಸಿಸಿ ಏಕದಿನ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಟಾಪ್‌-20 ಯಾದಿ ಅಲಂಕರಿಸಿದ್ದಾರೆ.

Advertisement

ಪ್ರವಾಸಿ ಐರ್ಲೆಂಡ್‌ ಎದುರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಜೆಮಿಮಾ 102 ರನ್‌ ಬಾರಿಸಿ ಶತಕದ ಬರವನ್ನು ನೀಗಿಸಿಕೊಂಡಿದ್ದರು. ಈ ಸಾಧನೆಯ ಬಳಿಕ ರ್‍ಯಾಂಕಿಂಗ್‌ ಯಾದಿಯಲ್ಲಿ 3 ಸ್ಥಾನ ನೆಗೆದು, ಈಗ 19ನೇ ಸ್ಥಾನಕ್ಕೆ ಬಂದಿದ್ದಾರೆ (563 ಅಂಕ). ಹರ್ಮನ್‌ಪ್ರೀತ್‌ ಕೌರ್‌ ಗೈರಲ್ಲಿ ಉಸ್ತುವಾರಿ ನಾಯಕಿಯಾಗಿರುವ ಸ್ಮತಿ ಮಂಧನಾ 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ (723). ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಟ್‌ (773) ಶ್ರೀಲಂಕಾದ ಚಾಮರಿ ಅತಪಟ್ಟು (733) ಮೊದಲೆರಡು ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯದ ಅಲಿಸ್ಸಾ ಹೀಲಿ 5ನೇ ಸ್ಥಾನಕ್ಕೆ ಏರಿದರು (678).

ಬೌಲಿಂಗ್‌ ವಿಭಾಗದಲ್ಲಿ ಇಂಗ್ಲೆಂಡ್‌ನ‌ ಸೋಫಿ ಎಕ್‌Éಸ್ಟೋನ್‌ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ (779). ಪ್ರಸಕ್ತ ವನಿತಾ ಆ್ಯಶಸ್‌ ಸರಣಿಯಲ್ಲಿ ಮಿಂಚುತ್ತಿರುವವ ಎಕ್‌Éಸ್ಟೋನ್‌ 2 ಪಂದ್ಯಗಳಿಂದ 6 ವಿಕೆಟ್‌ ಕೆಡವಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.