Advertisement
ವನಿತಾ ವಿಭಾಗದಿಂದ ಇಂಗ್ಲೆಂಡಿನ ಟಾಮಿ ಬೇಮಂಟ್, ನಥಾಲಿ ಶಿವರ್ ಮತ್ತು ನ್ಯೂಜಿಲ್ಯಾಂಡಿನ ಬ್ರೂಕ್ ಹಾಲಿಡೇ ಹೆಸರನ್ನು ಸೂಚಿಸಲಾಗಿದೆ.
Related Articles
ಆರ್. ಅಶ್ವಿನ್ ಫೆಬ್ರವರಿ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ 3 ಟೆಸ್ಟ್ ಆಡಿದ್ದರು. ಈ ಪಂದ್ಯಗಳಿಂದ ಒಟ್ಟು 176 ರನ್ ಜತೆಗೆ
24 ವಿಕೆಟ್ ಸಂಪಾದಿಸಿದ ಹಿರಿಮೆ ಅಶ್ವಿನ್ ಆಗಿದೆ. ಇದರಲ್ಲಿ ಒಂದು ಶತಕವೂ ಒಳಗೊಂಡಿದೆ. ಚೆನ್ನೈನ ದ್ವಿತೀಯ ಪಂದ್ಯ “ಅಶ್ವಿನ್ ಟೆಸ್ಟ್’ ಎಂದೇ ಜನಪ್ರಿಯಗೊಂಡಿರುವುದು ಈಗ ಇತಿಹಾಸ. ಇದೇ ವೇಳೆ ಜೋ ರೂಟ್ 333 ರನ್ ಬಾರಿಸುವ ಜತೆಗೆ ಪಾರ್ಟ್ ಟೈಮ್ ಬೌಲರ್ ಆಗಿ 6 ವಿಕೆಟ್ ಕೂಡ ಉರುಳಿಸಿದ್ದಾರೆ. ಆದರೆ ಅಹ್ಮದಾಬಾದ್ ಟೆಸ್ಟ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿಯೂ “ಮ್ಯಾಚ್ ವಿನ್ನರ್’ ಎನಿಸಿಕೊಳ್ಳಲು ಇವರಿಂದಾಗಲಿಲ್ಲ.
Advertisement
ವಿಂಡೀಸಿನ ಕೈಲ್ ಮೇಯರ್ ಅವರದು ಅದ್ಭುತ ಸಾಧನೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅಜೇಯ ದ್ವಿಶತಕ ಬಾರಿಸಿ ಬಾಂಗ್ಲಾದೇಶ ವಿರುದ್ಧ ಅಮೋಘ ಜಯ ತಂದಿತ್ತ ಪರಾಕ್ರಮ ಇವರದಾಗಿದೆ.