Advertisement

ಸಿಕಂದರ್‌ ರಝಾ, ಟಹ್ಲಿಯಾ ಮೆಕ್‌ಗ್ರಾತ್‌ ಐಸಿಸಿ ತಿಂಗಳ ಕ್ರಿಕೆಟಿಗರು

11:20 PM Sep 12, 2022 | Team Udayavani |

ದುಬಾೖ: ಜಿಂಬಾಬ್ವೆಯ ಮಧ್ಯಮ ಕ್ರಮಾಂಕದ ಬ್ಯಾಟರ್‌ ಸಿಕಂದರ್‌ ರಝಾ ಮತ್ತು ಆಸ್ಟ್ರೇಲಿ ಯದ ವನಿತಾ ಆಲ್‌ರೌಂಡರ್‌ ಟಹ್ಲಿಯಾ ಮೆಕ್‌ಗ್ರಾತ್‌ ಐಸಿಸಿ ಆಗಸ್ಟ್‌ ತಿಂಗಳ ಆಟಗಾರರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಐಸಿಸಿ ಸೋಮವಾರ ಇದನ್ನು ಪ್ರಕಟಿಸಿತು.

Advertisement

ಸಿಕಂದರ್‌ ರಝಾ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾದ ಜಿಂಬಾಬ್ವೆಯ ಮೊದಲ ಕ್ರಿಕೆಟಿಗ. ಬಾಂಗ್ಲಾದೇಶ ಮತ್ತು ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ರಝಾ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಬಾಂಗ್ಲಾ ಎದುರು ಎರಡು ಅಜೇಯ ಶತಕ ಬಾರಿಸಿದ ಹೆಗ್ಗಳಿಕೆ ಇವರದು (135 ಮತ್ತು 117). ರಝಾ ಬ್ಯಾಟಿಂಗ್‌ ಸಾಹಸದಿಂದ ಬಾಂಗ್ಲಾ ವಿರುದ್ಧ ಜಿಂಬಾಬ್ವೆ 2-1 ಸರಣಿ ಜಯಿಸಿತ್ತು.

ಟಹ್ಲಿಯಾ ಮೆಕ್‌ಗ್ರಾತ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಕ್ಕೆ ಚಿನ್ನದ ಪದಕ ತಂದೊಪ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next