Advertisement

ಟೀಮ್ ಇಂಡಿಯಾಕ್ಕೆ ಆಸೀಸ್ ನಲ್ಲಿ ಸರಿಯಾದ ಊಟ ಸಿಗಲಿಲ್ಲವೇ?

03:29 PM Oct 26, 2022 | Team Udayavani |

ಸಿಡ್ನಿ : ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರದ ಬಹುತೇಕ ಭಾರತೀಯ ಕ್ರಿಕೆಟಿಗರು ಊಟ ಮಾಡದೆ ತಮ್ಮ ಹೋಟೆಲ್‌ಗೆ ಮರಳಿದ ಘಟನೆ ನಡೆದಿದೆ. ಈ ಸಮಸ್ಯೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಐಸಿಸಿ ಹೇಳಿದ್ದು ಶೀಘ್ರದಲ್ಲೇ ವಿಷಯವನ್ನು ಬಗೆಹರಿಸುವುದಾಗಿ ಭರವಸೆ ನೀಡಿದೆ.

Advertisement

ಟಿ 20 ವಿಶ್ವ ಕಪ್ ಪಂದ್ಯಾವಳಿಗಳಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ರೋಹಿತ್ ಶರ್ಮಾ ಮತ್ತು ತಂಡ ಸಿಡ್ನಿ ಮೈದಾನದಲ್ಲಿ ತಮ್ಮ ಅಭ್ಯಾಸದ ನಂತರ ಪೂರ್ಣ ಊಟವನ್ನು ನಿರೀಕ್ಷಿಸಿದ್ದರು ಆದರೆ ಹಣ್ಣುಗಳು, ಕೋಲ್ಡ್ ಸ್ಯಾಂಡ್‌ವಿಚ್‌ಗಳು ಮತ್ತು ಫಲಾಫೆಲ್ ಮಾತ್ರ ದೊರಕಿದೆ. ಈ ಮೆನು ಭಾರತೀಯ ಕ್ರಿಕೆಟಿಗರಿಗೆ ಇಷ್ಟವಾಗಲಿಲ್ಲ, ಅವರು ಸುಮಾರು ಮೂರು ಗಂಟೆಗಳ ಕಾಲ ನೆಟ್ಸ್‌ನಲ್ಲಿ ಬೆವರು ಸುರಿಸಿದ ನಂತರ ಸಂಪೂರ್ಣ ರುಚಿಕರವಾದ ಊಟವನ್ನು ಸೇವಿಸುವ ಅಭ್ಯಾಸವನ್ನು ಹೊಂದಿದ್ದು, ಕೆಲವು ಭಾರತೀಯ ಕ್ರಿಕೆಟಿಗರು ಫಲಾಫೆಲ್ ಮತ್ತು ಹಣ್ಣುಗಳನ್ನು ತೆಗೆದುಕೊಂಡರು ಆದರೆ ಅವರಲ್ಲಿ ಹೆಚ್ಚಿನವರು ಪೂರ್ಣ ಊಟಕ್ಕಾಗಿ ಹೋಟೆಲ್‌ಗೆ ಹಿಂತಿರುಗಲು ನಿರ್ಧರಿಸಿದರು ಎಂದು ತಿಳಿದು ಬಂದಿದೆ.

ಅವರು ತಂಗಿರುವ ಹೋಟೆಲ್‌ನಿಂದ 42 ಕಿಮೀ ದೂರದ ಬ್ಲ್ಯಾಕ್‌ಟೌನ್‌ನಲ್ಲಿ (ಸಿಡ್ನಿಯ ಉಪನಗರ) ಅಭ್ಯಾಸದ ಸ್ಥಳವನ್ನು ನೀಡಿದ್ದರಿಂದ ಕಾರಣ ಊಟ ನಿರಾಕರಿಸಿದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಟೀಮ್ ಇಂಡಿಯಾಗೆ ನೀಡಿದ ಆಹಾರವು ಉತ್ತಮವಾಗಿಲ್ಲ. ಅವರಿಗೆ ಸ್ಯಾಂಡ್‌ವಿಚ್‌ಗಳನ್ನು ನೀಡಲಾಗಿದೆ ಮತ್ತು ಸಿಡ್ನಿಯಲ್ಲಿನ ಅಭ್ಯಾಸದ ನಂತರ ನೀಡಲಾದ ಆಹಾರವು ತಂಪಾಗಿತ್ತು ಮತ್ತು ಉತ್ತಮವಾಗಿಲ್ಲ ಎಂದು ಅವರು ಐಸಿಸಿಗೆ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next