Advertisement
ವರ್ಷದ ಟಿ20 ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತದ ಎಡಗೈ ವೇಗಿ ಅರ್ಶದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ. ಅರ್ಶದೀಪ್ 2024 ರ ಟಿ20 ವಿಶ್ವಕಪ್ ನಲ್ಲಿ ಎಂಟು ಪಂದ್ಯಗಳಿಂದ 12.64 ರ ಸರಾಸರಿಯಲ್ಲಿ ಮತ್ತು 7.16 ರ ಎಕಾನಮಿಯಲ್ಲಿ 17 ವಿಕೆಟ್ ಗಳನ್ನು ಗಳಿಸಿದ್ದರು. ಅವರು ಜಂಟಿಯಾಗಿ ಕೂಟದ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು.
Related Articles
Advertisement
ಇದೇ ವೇಳೆ ಐಸಿಸಿ ಏಕದಿನ ವರ್ಷದ ಆಟಗಾರ ಪ್ರಶಸ್ತಿಗೆ ನಾಲ್ವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಆದರೆ ಇದರಲ್ಲಿ ಯಾವುದೇ ಭಾರತೀಯರ ಹೆಸರಿಲ್ಲ. ಇದರಲ್ಲಿ ಶ್ರೀಲಂಕಾದ ಇಬ್ಬರು ಸ್ಥಾನ ಪಡೆದಿದ್ದಾರೆ. ಅವರೆಂದರೆ ವಾನಿಂದು ಹಸರಂಗ ಮತ್ತು ಕುಸಾಲ್ ಮೆಂಡಿಸ್.
ಏಕದಿನ ಕ್ರಿಕೆಟ್ ಪ್ರಶಸ್ತಿ ರೇಸ್ ನಲ್ಲಿರುವ ಇತರ ಇಬ್ಬರೆಂದರೆ ವೆಸ್ಟ್ ಇಂಡೀಸ್ ನ ಶರ್ಫೇನ್ ರುದರ್ಫೋರ್ಡ್ ಮತ್ತು ಅಫ್ಘಾನಿಸ್ತಾನದ ಅಜ್ಮತುಲ್ಲಾ ಓಮರ್ ಝೈ.