ದುಬಾೖ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪೇಸ್ ಬೌಲರ್ ಜಸ್‌ಪ್ರೀತ್ ಬುಮ್ರಾ ನೂತನ ಐಸಿಸಿ ಏಕದಿನ ರ್ಯಾಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಆಫ್ರಿಕಾ- ಶ್ರೀಲಂಕಾ ನಡುವಿನ 5 ಪಂದ್ಯಗಳ ಏಕದಿನ ಸರಣಿ ಬಳಿಕ ರ್‍ಯಾಂಕಿಂಗ್ ಯಾದಿಯನ್ನು ಪರಿಷ್ಕರಿಸಲಾಯಿತು. ಆಸ್ಟ್ರೇಲಿಯ ವಿರುದ್ಧ ಇತ್ತೀಚೆಗೆ ಮುಗಿದ 5 ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ 310 ರನ್ ಬಾರಿಸಿ ಗಮನ ಸೆಳೆದಿದ್ದರು. 202 ರನ್ ಹೊಡೆದ ಉಪನಾಯಕ ರೋಹಿತ್ ಶರ್ಮ ದ್ವಿತೀಯ ಸ್ಥಾನದಲ್ಲಿದ್ದಾರೆ. ನ್ಯೂಜಿಲ್ಯಾಂಡಿನ ರಾಸ್ ಟಯ್ಲರ್ 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಗಮ ನಾರ್ಹ ಪ್ರಗತಿ ಸಾಧಿಸಿದವರೆಂದರೆ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್. ಒಂದು ಶತಕ, 3 ಅರ್ಧ ಶತಕಗಳೊಂದಿಗೆ 353 ರನ್ ಪೇರಿಸಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದ ಡಿ ಕಾಕ್, 4 ಸ್ಥಾನಗಳ ಜಿಗಿತ ಕಂಡು 4ನೇ ಸ್ಥಾನಕ್ಕೆ ನೆಗೆದಿದ್ದಾರೆ.
ತಾಹಿರ್ 7 ಸ್ಥಾನ ನೆಗೆತ
ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ನ್ಯೂಜಿ ಲ್ಯಾಂಡ್ ವೇಗಿ ಟ್ರೆಂಟ್ ಬೌಲ್ಟ್ ಒಂದು ಸ್ಥಾನದ ಪ್ರಗತಿ ಕಂಡಿದ್ದು, 2ನೇ ಸ್ಥಾನಕ್ಕೆ ಬಂದಿದ್ದಾರೆ. 2ನೇ ಸ್ಥಾನದಲ್ಲಿದ್ದ ಅಫ್ಘಾನಿಸ್ಥಾನದ ರಶೀದ್ ಖಾನ್ ಮೂರಕ್ಕೆ ಇಳಿದಿದ್ದಾರೆ. ದಕ್ಷಿಣ ಆಫ್ರಿಕಾದ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಆವರದು 7 ಸ್ಥಾನಗಳ ಭರ್ಜರಿ ನೆಗೆತ. ಶ್ರೀಲಂಕಾ ಸರಣಿಯಲ್ಲಿ 9 ವಿಕೆಟ್ ಉರುಳಿಸಿದ ಅವರೀಗ 4ನೇ ಸ್ಥಾನಕ್ಕೆ ಬಂದಿದ್ದಾರೆ.ಆಲ್‌ರೌಂಡರ್‌ಗಳ ಯಾದಿಯಲ್ಲಿ ರಶೀದ್ ಖಾನ್ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.