Advertisement

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

08:55 PM Jan 26, 2022 | Team Udayavani |

ದುಬೈ: ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಏಕದಿನ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ದ್ವಿತೀಯ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ದಕ್ಷಿಣ ಆಫ್ರಿಕಾ ಎದುರಿನ 3 ಪಂದ್ಯಗಳ ಸರಣಿಯಲ್ಲಿ ಅವರು 2 ಅರ್ಧಶತಕ ಬಾರಿಸಿದ್ದರು, ಒಂದರಲ್ಲಿ ಸೊನ್ನೆ ಸುತ್ತಿದ್ದರು. ಇದರಿಂದ 8 ಅಂಕ ಕಡಿತಗೊಂಡಿತ್ತು (836).ಇದೇ ವೇಳೆ ಸರಣಿಯಿಂದಲೇ ಹೊರಗುಳಿದಿದ್ದ ರೋಹಿತ್‌ ಶರ್ಮ 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ (801).

ಸರಣಿಯಲ್ಲಿ 169 ರನ್‌ ಬಾರಿಸಿದ ಶಿಖರ್‌ ಧವನ್‌ 15ನೇ ಸ್ಥಾನಕ್ಕೆ ಏರಿದ್ದಾರೆ.

ರಿಷಭ್‌ ಪಂತ್‌ ಅವರದು 5 ಸ್ಥಾನಗಳ ಪ್ರಗತಿ (82). ಪಾಕಿಸ್ತಾನದ ಬಾಬರ್‌ ಆಜಂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ (873).

ಇದನ್ನೂ ಓದಿ:ಕ್ರಿಸ್ ಗೇಲ್ ಗೆ ಸಂದೇಶ ಕಳುಹಿಸಿದ ಪ್ರಧಾನಿ ನರೇಂದ್ರ ಮೋದಿ: ಯುನಿವರ್ಸಲ್ ಬಾಸ್ ಹೇಳಿದ್ದೇನು?

Advertisement

ದಕ್ಷಿಣ ಆಫ್ರಿಕಾ ಕ್ವಿಂಟನ್‌ ಡಿ ಕಾಕ್‌ ಮತ್ತು ರಸ್ಸಿ ವಾನ್‌ ಡರ್‌ ಡುಸೆನ್‌ ಅವರದು ಉತ್ತಮ ಪ್ರಗತಿ. ಒಂದು ಶತಕ ಸೇರಿದಂತೆ 229 ರನ್‌ ಬಾರಿಸಿದ ಡಿ ಕಾಕ್‌ 4 ಸ್ಥಾನ ಮೇಲೇರಿದ್ದು, 5ನೇ ಸ್ಥಾನಿಯಾಗಿದ್ದಾರೆ (783). ಸರಣಿಯಲ್ಲಿ 218 ರನ್‌ ಗಳಿಸಿದ ಡುಸೆನ್‌ ಜೀವನಶ್ರೇಷ್ಠ 10ನೇ ಸ್ಥಾನ ಪಡೆದಿದ್ದಾರೆ. ಟೆಂಬ ಬವುಮ ಅವರದೂ ಜೀವನಶ್ರೇಷ್ಠ ಶ್ರೇಯಾಂಕವಾಗಿದೆ. ಅವರು 80ರಿಂದ 59ನೇ ಸ್ಥಾನಕ್ಕೆ ನೆಗೆದಿದ್ದಾರೆ.

ಬುಮ್ರಾ 7ನೇ ಸ್ಥಾನ: ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ 7ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಉಳಿದಂತೆ ಅಗ್ರ ಹತ್ತರ ಪಟ್ಟಿಯಲ್ಲಿ ಭಾರತದ ಬೌಲರ್‌ಗಳಾÂರೂ ಇಲ್ಲ. ಲುಂಗಿ ಎನ್‌ಗಿಡಿ ಅಗ್ರ-20ಕ್ಕೆ ಮರಳಿದ್ದು, ಕೇಶವ್‌ ಮಹಾರಾಜ್‌ ಜೀವನಶ್ರೇಷ್ಠ 33ನೇ ಸ್ಥಾನಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next