Advertisement

ICC ODI Rankings: ಏಷ್ಯಾಕಪ್‌ ನಲ್ಲಿ ಅಮೋಘ ಬೌಲಿಂಗ್‌; ನಂ.1 ಏಕದಿನ ಬೌಲರ್‌ ಆದ ಸಿರಾಜ್

03:29 PM Sep 20, 2023 | Team Udayavani |

ನವದೆಹಲಿ: ಏಷ್ಯಾಕಪ್‌ ಟೂರ್ನಿಯಲ್ಲಿನ ಅಮೋಘ ಪ್ರದರ್ಶನದಿಂದ ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಸಿರಾಜ್‌ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ನಂ.1 ಬೌಲರ್‌ ಆಗಿ ಹೊರಹೊಮ್ಮಿದ್ದಾರೆ.

Advertisement

ಟೀಮ್‌ ಇಂಡಿಯಾ ಏಷ್ಯಾಕಪ್‌ ಫೈನಲ್‌ ನಲ್ಲಿ ಲಂಕಾವನ್ನು 50 ರನ್‌ ಗಳಿಗೆ ಆಲ್‌ ಔಟ್‌ ಮಾಡಿ, ಸುಲಭ ಜಯಸಾಧಿಸಿ, ಏಷ್ಯಾ ಚಾಂಪಿಯನ್‌ ಆಗಿದ್ದಾರೆ. ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗಮನ ಸೆಳೆದ ಪ್ರಮುಖ ಅಂಶವೆಂದರೆ ಅದು ಸಿರಾಜ್‌ ಅವರ ಅಮೋಘ ಬೌಲಿಂಗ್‌ ಪ್ರದರ್ಶನ. ಸಿರಾಜ್ ಕೇವಲ 7 ಓವರ್‌ಗಳಲ್ಲಿ 6 ವಿಕೆಟ್ ಪಡೆದಿದ್ದರು. 21 ರನ್‌ ಕೊಟ್ಟು 6 ವಿಕೆಟ್‌ ಪಡೆದು ಲಂಕಾದ ಪ್ರಮುಖ ವಿಕೆಟ್‌ ಗಳನ್ನು ಪಡೆದಿದ್ದರು.

ಈ ಸಾಧನೆ ಅವರ ರ‍್ಯಾಂಕಿಂಗ್‌ ನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಐಸಿಸಿ ನೂತನ ಏಕದಿನ‌ ಬೌಲಿಂಗ್ ರ‍್ಯಾಂಕಿಂಗ್‌ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನಂ.1 ಏಕದಿನ ಬೌಲರ್‌ ಆಗಿ ಸಿರಾಜ್‌ ಹೊರಹೊಮ್ಮಿದ್ದಾರೆ.

ಏಷ್ಯಾಕಪ್‌ ಫೈನಲ್‌ ಪಂದ್ಯಕ್ಕೂ ಮುನ್ನ  ಸಿರಾಜ್‌ 637 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದ್ದರು. ಫೈನಲ್‌ ಪಂದ್ಯದಲ್ಲಿನ ಅವರ ಶ್ರೇಷ್ಠಮಟ್ಟದ ಬೌಲಿಂಗ್‌ ನಿಂದ ಅವರು 694 ಅಂಕಗಳನ್ನು ಪಡೆದು ನಂ.1 ಬೌಲರ್‌ ಆಗಿದ್ದಾರೆ. 678 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯದ ಜೋಶ್ ಹ್ಯಾಜಲ್‌ ವುಡ್‌ ಇದ್ದಾರೆ.

2023ರ ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ತವರಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಸಿರಾಜ್‌ ನಂ.1 ಬೌಲರ್‌ ಆಗಿದ್ದರು.

Advertisement

ಐಸಿಸಿ ಏಕದಿನ ಬೌಲಿಂಗ್‌ ರ‍್ಯಾಂಕಿಂಗ್‌:

  1. ಮೊಹಮ್ಮದ್ ಸಿರಾಜ್ – 694
  2. ಜೋಶ್ ಹ್ಯಾಜಲ್‌ವುಡ್ – 678
  3. ಟ್ರೆಂಟ್ ಬೋಲ್ಟ್ – 677
  4. ಮುಜೀಬ್ ಉರ್ ರೆಹಮಾನ್ – 657
  5. ರಶೀದ್ ಖಾನ್ – 655

ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌: ಇನ್ನು ಏಕದಿನ ಬ್ಯಾಟಿಂಗ್‌ ರ‍್ಯಾಂಕಿಂಗ್‌ ನಲ್ಲೂ ಟೀಮ್‌ ಇಂಡಿಯಾದ ಬ್ಯಾಟರ್‌ ಗಳು ಉತ್ತಮ ಅಂಕಗಳಿಸಿದ್ದಾರೆ. ಏಷ್ಯಾಕಪ್‌ ನಲ್ಲಿನ ಶತಕ ಸೇರಿದಂತೆ ಅಮೋಘ ಪ್ರದರ್ಶನದಿಂದ ವಿರಾಟ್‌ ಕೊಹ್ಲಿ ನಂ.8 ಬ್ಯಾಟರ್‌ ಆಗಿ ಹೊರಹೊಮ್ಮಿದ್ದಾರೆ. ಶುಭ್ಮನ್‌ ಗಿಲ್ ಮತ್ತೆ ನಂ.2 ಸ್ಥಾನಕ್ಕೆ ಮರಳಿದ್ದಾರೆ. ಮೂರು ಅರ್ಧ ಶತಕಗಳನ್ನು ಬಾರಿಸಿದ ನಾಯಕ ರೋಹಿತ್‌ ಶರ್ಮಾ 10ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಇನ್ನು ಆಲ್‌ರೌಂಡರ್‌ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯಾ ಏಷ್ಯಾಕಪ್‌ ನಲ್ಲಿನ ಉತ್ತಮ ಆಟದಿಂದ 6ನೇ ಸ್ಥಾನಕ್ಕೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next