Advertisement

ಐಸಿಸಿ ಪುರುಷರ ಏಕದಿನ ಶ್ರೇಯಾಂಕ: ನ್ಯೂಜಿಲ್ಯಾಂಡ್ ಗೆ ಅಗ್ರಸ್ಥಾನ

03:40 PM Aug 23, 2022 | Team Udayavani |

ದುಬೈ: ಜಿಂಬಾಬ್ವೆ ತಂಡದ ಎದುರು ಕ್ಲೀನ್ ಸ್ವೀಪ್ ಮಾಡುವ ಮೂಲಕ ಭಾರತವು ಮಂಗಳವಾರ  ಬಿಡುಗಡೆಯಾದ ಐಸಿಸಿ ಏಕದಿನ ತಂಡದ ರ‍್ಯಾಂಕಿಂಗ್ ನಲ್ಲಿ ಮೂರನೇ ಸ್ಥಾನವನ್ನು ಕಾಯ್ದುಕೊಳ್ಳಲು ನೆರವಾಯಿತು. ಹರಾರೆಯಲ್ಲಿ ನಡೆದ ಸರಣಿಯಲ್ಲಿ 3-0 ಅಂತರದ ಗೆಲುವಿನ ಹಿನ್ನಲೆಯಲ್ಲಿ ಭಾರತ ಈಗ 111 ರೇಟಿಂಗ್ ಅಂಕಗಳನ್ನು ಹೊಂದಿದೆ.

Advertisement

ಇತ್ತೀಚೆಗಷ್ಟೇ ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನ ಕೂಡ ಸರಣಿ ಸರಣಿ ಸ್ವೀಪ್ ಮಾಡಿತ್ತು. ಬಾಬರ್ ಅಜಮ್ ನೇತೃತ್ವದ ತಂಡವು ತಮ್ಮ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಸರಣಿಯಲ್ಲಿ ಇದೇ ರೀತಿಯ 3-0 ಅಂತರದಿಂದ ಕಠಿಣ ಹೋರಾಟದ ಜಯವನ್ನು ಗಳಿಸಿತ್ತು. 107 ರೇಟಿಂಗ್ ಪಾಯಿಂಟ್‌ಗಳ ಮೂಲಕ ನಾಲ್ಕನೇ ಸ್ಥಾನದಲ್ಲಿದೆ.

ವೆಸ್ಟ್ ಇಂಡೀಸ್ ವಿರುದ್ಧ 2-1 ಸರಣಿಯ ಜಯದ ನಂತರ ನ್ಯೂಜಿಲ್ಯಾಂಡ್ 124 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ, ಇಂಗ್ಲೆಂಡ್ 119 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ 5 ನೇ, ದಕ್ಷಿಣ ಆಫ್ರಿಕಾ 6 ನೇ, ಬಾಂಗ್ಲಾದೇಶ 7ನೇ , ಶ್ರೀಲಂಕಾ 8ನೇ, ವೆಸ್ಟ್ ಇಂಡೀಸ್ 9 ನೇ ಮತ್ತು ಅಫ್ಘಾನಿಸ್ತಾನ 10 ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next