Advertisement

ICC; ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಸ್ವೀಕರಿಸಿದ ಕೊಹ್ಲಿ

12:15 AM Jun 03, 2024 | Team Udayavani |

ನ್ಯೂಯಾರ್ಕ್‌: ಭಾರತದ ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ 2023ರ ಐಸಿಸಿ “ವರ್ಷದ ಏಕದಿನ ಕ್ರಿಕೆಟಿಗ’ ಪ್ರಶಸ್ತಿ ಸ್ವೀಕರಿಸಿದ್ದಾರೆ.

Advertisement

ಕೊಹ್ಲಿ 2023ರ ಏಕದಿನ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 24 ಇನ್ನಿಂಗ್ಸ್‌ನಲ್ಲಿ 72.47ರ ಸರಾಸರಿಯಲ್ಲಿ 1,377 ರನ್‌ ಬಾರಿಸಿದ್ದರು. ಇದರಲ್ಲಿ 6 ಶತಕಗಳು ಮತ್ತು 8 ಅರ್ಧ ಶತಕಗಳು ಸೇರಿವೆ.

2023ರಲ್ಲಿ ಭಾರತದ ಏಷ್ಯಾ ಕಪ್‌ ಗೆಲುವಿನಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ಸೂಪರ್‌-4 ಹಂತದ ಪಾಕಿಸ್ಥಾನ ವಿರುದ್ಧದ ಹೈ ವೋಲ್ಟೆàಜ್‌ ಪಂದ್ಯದಲ್ಲಿ ಅವರು 94 ಎಸೆತಗಳಲ್ಲಿ ಅಜೇಯ 122 ರನ್‌ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಏಕದಿನ ವಿಶ್ವಕಪ್‌ನ 11 ಪಂದ್ಯಗಳಲ್ಲಿ 765 ರನ್‌ ಬಾರಿಸಿ ಗಮನ ಸೆಳೆದಿದ್ದರು. ಇದೇ ವೇಳೆ ನ್ಯೂಜಿಲ್ಯಾಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ಏಕದಿನದಲ್ಲಿ 50 ಶತಕಗಳ ಸಾಧನೆಗೈದಿದ್ದರು. ಈ ಮೂಲಕ ಸಚಿನ್‌ ಹೆಸರಿನಲ್ಲಿದ್ದ 49 ಶತಕಗಳ ದಾಖಲೆಯನ್ನು ಮುರಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next