Advertisement

ಸೂಪರ್ ಓವರ್ ನಿಯಮ ಬದಲಿಸಿದ ಐಸಿಸಿ: ಹೊಸ ನಿಯಮದಲ್ಲೇನಿದೆ ಗೊತ್ತಾ?

10:16 AM Oct 16, 2019 | keerthan |

ದುಬೈ: ಕಳೆದ ವಿಶ್ವಕಪ್ ಕ್ರಿಕೆಟ್ ಫೈನಲ್ ನಲ್ಲಿ ಭಾರಿ ಟೀಕೆಗೆ ಕಾರಣವಾದ ಸೂಪರ್ ಓವರ್ ನ ಬೌಂಡರಿ ಕೌಂಟ್ ಮಾದರಿಯನ್ನು ಐಸಿಸಿ ಬದಲಾಯಿಸಿದೆ. ಇನ್ನು ಮುಂದೆ ಸೂಪರ್ ಓವರ್ ಟೈ ಆದಾಗ ಹೊಸ ನಿಯಮ ಜಾರಿಗೆ ಬರಲಿದೆ.

Advertisement

ವಿಶ್ವ ಕೂಟಗಳ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು ಗಳಿಸಿದ ರನ್ ಒಂದೇ ಆಗಿದ್ದರೆ ಒಂದು ಓವರ್ ಸೂಪರ್ ಓವರ್ ಆಡಿಸಲಾಗುತ್ತದೆ. ಒಂದು ವೇಳೆ ಸೂಪರ್ ಓವರ್ ಕೂಡಾ ಸಮ-ಸಮ ಆದರೆ ಈವರೆಗೆ ಆಗ ಯಾವ ತಂಡ ಅತೀ ಹೆಚ್ಚು ಬೌಂಡರಿ ಬಾರಿಸುತ್ತದೆಯೋ ಆ ತಂಡ ವಿಜಯಿ ಎಂದು ಘೋಷಿಸಲಾಗುತಿತ್ತು. ವಿಶ್ವಕಪ್ ಫೈನಲ್ ನಲ್ಲಿಇಂಗ್ಲೆಂಡ್ ಜಯ ಗಳಿಸಿದ್ದು ಕೂಡಾ ಇದೇ ಮಾದರಿಯಲ್ಲಿ.

ಆದರೆ ಈ ನಿಯಮಕ್ಕೆ ಬಹಳಷ್ಟು ಟೀಕೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಐಸಿಸಿ ಈ ನಿಯಮವನ್ನು ಬದಲಿಸಿದೆ. ಮುಂದಿನ ದಿನಗಳಲ್ಲಿ ಸೂಪರ್ ಓವರ್ ಟೈ ಆದ ಸಂದರ್ಭ ಬೌಂಡರಿ ಕೌಂಟ್ ಮಾಡಲಾಗುವುದಿಲ್ಲ. ಬದಲಾಗಿ ಯಾವುದಾದರೂ ಒಂದು ತಂಡ ವಿಜಯಿಯಾಗುವರೆಗೆ ಸೂಪರ್ ಓವರ್ ಆಡಿಸಲಾಗುತ್ತದೆ.

ಕೇವಲ ಸೆಮಿ ಫೈನಲ್ ಮತ್ತು ಫೈನಲ್ ಮಾತ್ರವಲ್ಲದೆ ಎಲ್ಲಾ ಪಂದ್ಯಗಳಿಗೆ ಇನ್ನು ಮುಂದೆ ಸೂಪರ್ ಓವರ್ ಅಳವಡಿಸಲು ಐಸಿಸಿ ಚಿಂತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next