Advertisement

Cricket; ಸೆಹವಾಗ್, ಡಯಾನ ಎಡುಲ್ಜಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ

10:20 AM Nov 14, 2023 | Team Udayavani |

ದುಬೈ: ಭಾರತದ ಮಾಜಿ ಕ್ರಿಕೆಟಿಗ, ಸ್ಫೋಟಕ ಬ್ಯಾಟಿಂಗ್‌ ನಿಂದ ಬೌಲರ್‌ಗಳನ್ನು ಹೆದರಿಸಿದ್ದ ವೀರೇಂದ್ರ ಸೆಹವಾಗ್‌, ಭಾರತ ಮಹಿಳಾ ಟೆಸ್ಟ್‌ ತಂಡದ ಮಾಜಿ ನಾಯಕಿ ಡಯಾನ ಎಡುಲ್ಜಿ ಪ್ರತಿಷ್ಠಿತ ಐಸಿಸಿ ಹಾಲ್‌ ಆಫ್ ಫೇಮ್‌ಗೆ ಸೇರಿಕೊಂಡಿದ್ದಾರೆ.

Advertisement

ಇವರೊಂದಿಗೆ ಶ್ರೀಲಂಕಾ ಕಂಡ ಅತ್ಯುತ್ತಮ ಬ್ಯಾಟರ್‌ ಅರವಿಂದ ಡಿ ಸಿಲ್ವಾಗೂ ಸ್ಥಾನ ಸಿಕ್ಕಿದೆ. ಈ ಮೂವರ ಸೇರ್ಪಡೆಯೊಂದಿಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದವರ ಸಂಖ್ಯೆ 112ಕ್ಕೆ ಏರಿದೆ. ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಸ್ಥಾನ ಪಡೆದವರ ಸಂಖ್ಯೆ 9ಕ್ಕೇರಿದೆ.

ಇದಕ್ಕೂ ಮುನ್ನ ಸುನೀಲ್‌ ಗಾವಸ್ಕರ್‌, ಬಿಶನ್‌ ಸಿಂಗ್‌ ಬೇಡಿ, ಕಪಿಲ್‌ ದೇವ್‌, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡುಲ್ಕರ್‌, ವಿನೂ ಮಂಕಡ್‌ ಸ್ಥಾನ ಲಭಿಸಿತ್ತು. ಇದು ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಾಜಿ ಕ್ರಿಕೆಟಿಗರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ ನೀಡುವ ಶ್ರೇಷ್ಠ ಗೌರವಗಳಲ್ಲೊಂದು. ಆಗಾಗ ಈ ಪಟ್ಟಿಗೆ ಹೊಸ ಹೆಸರುಗಳನ್ನು ಐಸಿಸಿ ಸೇರಿಸುತ್ತಲೇ ಇರುತ್ತದೆ. ಈ ಬಾರಿ ವೀರೇಂದ್ರ ಸೆಹವಾಗ್‌ ಸೇರ್ಪಡೆ ಭಾರತೀಯರಿಗೆ ಸಂತಸ ಮೂಡಿಸಿದೆ.

ಸೆಹವಾಗ್‌ ಟೆಸ್ಟ್‌ ಕ್ರಿಕೆಟ್‌ಗೂ ಆಕರ್ಷಣೆ ತಂದುಕೊಟ್ಟ ಸ್ಫೋಟಕ ತಾರೆ. ಅವರೆದುರು ಎಂತಹ ಬೌಲರ್‌ಗಳೇ ಆದರೂ ಮಂಕಾಗುತ್ತಿದ್ದರು. ಅವರು ಕ್ರೀಸ್‌ ನಲ್ಲಿರುವವರೆಗೂ ಎದುರಾಳಿ ತಂಡಗಳು ಹೆದರುತ್ತಿದ್ದವು. ಟೆಸ್ಟ್‌ನಲ್ಲಿ ಎರಡು ತ್ರಿಶತಕ ಬಾರಿಸಿರುವ ಏಕೈಕ ಭಾರತೀಯ ಸೆಹವಾಗ್‌.

Advertisement

Udayavani is now on Telegram. Click here to join our channel and stay updated with the latest news.

Next