Advertisement

ವಿಶ್ವಕಪ್‌ ತಾಣಗಳ ವೀಕ್ಷಣೆಗೆ ಐಸಿಸಿ ನಿಯೋಗ

11:16 PM Jul 29, 2023 | Team Udayavani |

ಹೊಸದಿಲ್ಲಿ: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ವೇಳಾಪಟ್ಟಿ ಹಾಗೂ ತಾಣಗಳನ್ನು ಈಗಾಗಲೇ ಪ್ರಕಟಿಸ ಲಾಗಿದೆ. ಈ ತಾಣಗಳ ವೀಕ್ಷಣೆಗೆ ಐಸಿ ಸಿಯ ವಿಚಕ್ಷಣ ತಂಡವೊಂದು ಭಾರತಕ್ಕೆ ಆಗಮಿಸಿದ್ದು, ಸದ್ಯ ಅಹ್ಮದಾಬಾದ್‌ನಲ್ಲಿದೆ ಎಂಬುದಾಗಿ ಬಿಸಿಸಿಐ ತಿಳಿಸಿದೆ.

Advertisement

ಈ ತಂಡ ಭದ್ರತಾ ವ್ಯವಸ್ಥೆ, ಪ್ರಸಾರ ವಿಭಾಗ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರನ್ನು ಒಳಗೊಂಡಿದೆ. ಜು. 25ರಂದು ಮುಂಬಯಿಯ ವಾಂಖೇಡೆ ಸ್ಟೇಡಿಯಂಗೆ ಭೇಟಿ ನೀಡುವ ಮೂಲಕ ತನ್ನ ಕರ್ತವ್ಯವನ್ನು ಆರಂಭಿಸಿತ್ತು. ಈ ಕುರಿತು ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌ ಅಧ್ಯಕ್ಷ ಅಮೋಲ್‌ ಕಾಳೆ ಪ್ರತಿಕ್ರಿಯಿಸಿದ್ದು, “ನಮ್ಮ ಯೋಜನೆ, ತಯಾರಿ ಬಗ್ಗೆ ಐಸಿಸಿ ನಿಯೋಗ ತೃಪ್ತಿ ಸೂಚಿಸಿದೆ. ಟಿಕೆಟ್‌ ಮಾರಾಟ ಯೋಜನೆ ಹಾಗೂ ಟಿಕೆಟ್‌ ಬೆಲೆಯ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಸೋಮವಾರ ಅಪೆಕ್ಸ್‌ ಕೌನ್ಸಿಲ್‌ ಸಭೆಯೊಂದನ್ನು ನಡೆಸಲಾಗುವುದು’ ಎಂದಿದ್ದಾರೆ.

ವಾಂಖೇಡೆ ಸ್ಟೇಡಿಯಂ ಬಳಿಕ ದಕ್ಷಿಣ ಭಾರತದ 3 ತಾಣಗಳಿಗೆ ಐಸಿಸಿ ತಂಡ ಭೇಟಿ ನೀಡಿದೆ. ಜು. 26ರಂದು ಚೆನ್ನೈಯ ಚೆಪಾಕ್‌ ಸ್ಟೇಡಿಯಂ, ಜು. 27ರಂದು ತಿರುವನಂತಪುರ ಸ್ಟೇಡಿಯಂ (ಇಲ್ಲಿ ಅಭ್ಯಾಸ ಪಂದ್ಯಗಳು ನಡೆಯಲಿವೆ), ಶುಕ್ರವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿತ್ತು. ಚೆನ್ನೈ ಮತ್ತು ಬೆಂಗಳೂರು ಕ್ರೀಡಾಂಗಣದ ಬಗ್ಗೆ ತೃಪ್ತಿ ಸೂಚಿಸಿದೆ. ಆದರೆ ತಿರುವನಂತಪುರ ಕ್ರೀಡಾಂಗಣದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲು ಸೂಚಿಸಿದೆ ಎಂದು ತಿಳಿದು ಬಂದಿದೆ.

ಅಹ್ಮದಾಬಾದ್‌ ವಿಶ್ವಕಪ್‌ ಪಂದ್ಯಾ ವಳಿಯ ಪ್ರಧಾನ ಕೇಂದ್ರವಾಗಿದ್ದು, ಇಲ್ಲಿ ಉದ್ಘಾಟನಾ ಪಂದ್ಯ ಮತ್ತು ಫೈನಲ್‌ ಸ್ಪರ್ಧೆ ಏರ್ಪಡಲಿದೆ. ಈ ನಡುವೆ ಭಾರತ-ಪಾಕಿಸ್ಥಾನ ನಡುವಿನ ಹೈ ವೋಲ್ಟೆàಜ್‌ ಪಂದ್ಯವೂ ಸಾಗಲಿದೆ. ಈ ಸ್ಟೇಡಿಯಂನ ವರದಿ ಇನ್ನಷ್ಟೇ ಕೈಸೇರಬೇಕಿದೆ.

ಅನಂತರ ಐಸಿಸಿ ತಂಡ ಹೈದರಾಬಾದ್‌ (ಜು. 31) ಸ್ಟೇಡಿಯಂಗೆ ತೆರಳಲಿದೆ.

Advertisement

ಆ. 10ರಿಂದ ಟಿಕೆಟ್‌ ಮಾರಾಟ?
ಪ್ರತಿಷ್ಠಿತ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾ ವಳಿಯ ಪ್ರಮುಖ ಹಂತವೆಂದರೆ ಟಿಕೆಟ್‌ ಮಾರಾಟ. ಇದಕ್ಕಾಗಿ ಕ್ರಿಕೆಟ್‌ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯ ಕ್ರಿಕೆಟ್‌ ಮಂಡಳಿಗಳ ಮುಖ್ಯಸ್ಥರನ್ನು ಭೇಟಿ ಮಾಡಿದ ಬಳಿಕ ಜು. 31ರಂದು ಟಿಕೆಟ್‌ ಮಾರಾಟದ ಬಗ್ಗೆ ತಿಳಿಸಲಾಗುವುದು ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ. ಟಿಕೆಟ್‌ ಮಾರಾಟ ಆಗಸ್ಟ್‌ 10ರಿಂದ ಆರಂಭವಾಗುವ ಸಾಧ್ಯತೆ ಇದೆ.

ಜು. 27ರಂದು ಸಭೆ ನಡೆದಿದ್ದು, ಐಸಿಸಿ ಮತ್ತು ಬಿಸಿಸಿಐಗೆ ನಿರ್ದಿಷ್ಟ ಸಂಖ್ಯೆಯ ಟಿಕೆಟ್‌ ಬೇಕಾಗುತ್ತದೆ ಎಂಬುದಾಗಿ ಆಯಾ ಮಂಡಳಿಗೆ ಸೂಚಿಸಲಾಗಿದೆ ಎಂದು ಶಾ ಹೇಳಿದರು. ಮೊದಲು ಆನ್‌ಲೈನ್‌ ಮಾರಾಟ, ಬಳಿಕ ಸ್ಟೇಡಿಯಂಗಳಲ್ಲಿ ಕೌಂಟರ್‌ ಸೇಲ್‌ ವ್ಯವಸ್ಥೆ ಮಾಡಲಾಗುವುದು. ಯಾವುದೇ ತೊಡಕಿಲ್ಲದೆ ಟಿಕೆಟ್‌ಗಳನ್ನು ಖರೀದಿಸಲು ಬಿಸಿಸಿಐ ವ್ಯವಸ್ಥೆ ಮಾಡಲಿದೆ ಎಂದು ಶಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next