Advertisement

ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ರೆಡಿ;  ಕನ್ನಡಿಗ ಪಾಂಡೆಗೆ ಸ್ಥಾನ

01:06 PM May 08, 2017 | Team Udayavani |

ನವದೆಹಲಿ: ಮುಂದಿನ ತಿಂಗಳು ಇಂಗ್ಲೆಂಡಿನಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿಗೆ ವಿರಾಟ್ ಕೊಹ್ಲಿ ನೇತೃತ್ವದ 15 ಜನರ ಟೀಂ ಇಂಡಿಯಾ ಆಟಗಾರರ ಹೆಸರನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದೆ. ತಂಡದಲ್ಲಿ ಕನ್ನಡಿಗ ಮನೀಷ್ ಪಾಂಡೆಗೆ ಸ್ಥಾನ ಸಿಕ್ಕಿದ್ದು, ಇಶಾಂತ್ ಶರ್ಮಾ ಅವರನ್ನು ಕೈಬಿಡಲಾಗಿದೆ.

Advertisement

ಜೂನ್ 1ರಿಂದ ಇಂಗ್ಲೆಂಡ್ ನಲ್ಲಿ ಬಲಿಷ್ಠ 8 ತಂಡಗಳ ನಡುವೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಕೂಟದಲ್ಲಿ ಭಾರತೀಯ ತಂಡವು ಭಾಗವಹಿಸಲಿದೆ ಎಂದು ಬಿಸಿಸಿಐ ಭಾನುವಾರ ನಡೆದ ಭಾರತೀಯ ಕ್ರಿಕೆಟ್‌ ಮಂಡಳಿಯ ವಿಶೇಷ ಮಹಾಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿತ್ತು.

ಬಿಸಿಸಿಐ ಪ್ರಕಟಿಸಿದ ತಂಡದಲ್ಲಿ ಹಿರಿಯ ಆಟಗಾರರಾದ ಗೌತಮ್ ಗಂಭೀರ್, ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಅವರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಟೀಂ ಇಂಡಿಯಾ ಸ್ಕ್ವಾಡ್ ಹೀಗಿದೆ:
ವಿರಾಟ್ ಕೊಹ್ಲಿ (ನಾಯಕ)
ಶಿಖರ್ ಧವನ್
ರೋಹಿತ್ ಶರ್ಮಾ
ಅಜಿಂಕ್ಯ ರಹಾನೆ
ಎಂಎಸ್ ಧೋನಿ (ವಿಕೆಟ್ ಕೀಪರ್)
ಯುವರಾಜ ಸಿಂಗ್
ಕೇದಾರ್ ಜಾದವ್
ಹಾರ್ದಿಕ್ ಪಾಂಡ್ಯ
ಆರ್.ಆಶ್ವಿನ್
ರವೀಂದ್ರ ಜಡೇಜಾ
ಮೊಹಮ್ಮದ್ ಶಮಿ
ಉಮೇಶ್ ಯಾದವ್
ಭುವನೇಶ್ವರ್ ಕುಮಾರ್
ಜಸ್ಪ್ರೀತ್ ಬೂಮ್ರಾ
ಮನೀಷ್ ಪಾಂಡೆ

Advertisement

Udayavani is now on Telegram. Click here to join our channel and stay updated with the latest news.

Next