Advertisement

ICC Big Shock;ಟೆಸ್ಟ್‌ ಗೆ ಮರಳಿದ ವನಿಂದು ಹಸರಂಗಗೆ ಎರಡು ಟೆಸ್ಟ್‌  ನಿಷೇಧ ಶಿಕ್ಷೆ !

11:50 PM Mar 20, 2024 | Team Udayavani |

ಕೊಲಂಬೊ: ಇಂಥದೊಂದು ಎಡವಟ್ಟಿಗೆ ಸಿಲುಕಿದ ಕ್ರಿಕೆಟಿಗ ಶ್ರೀಲಂಕಾದ ವನಿಂದು ಹಸರಂಗ. ಟೆಸ್ಟ್‌ ಕ್ರಿಕೆಟಿಗೆ ವಿದಾಯ ಹೇಳಿದ್ದ ಅವರು ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಸರಣಿಗೆ ವಾಪಸಾಗಲು ನಿರ್ಧರಿಸಿ ದ್ದರು. ಇವರಿಗೀಗ ಐಸಿಸಿ ಬಿಗ್‌ ಶಾಕ್‌ ನೀಡಿದೆ. 2 ಟೆಸ್ಟ್‌ ಪಂದ್ಯಗಳ ನಿಷೇಧ ಹೇರಿದೆ!.

Advertisement

ಬಾಂಗ್ಲಾದೇಶ ವಿರುದ್ಧ ನಡೆದ 3ನೇ ಏಕದಿನ ಪಂದ್ಯದ ವೇಳೆ ಅಂಪಾಯರ್‌ ತೀರ್ಪಿನ ವಿರುದ್ಧ ಹಸರಂಗ ಅಂಗಳದಲ್ಲೇ ವಾದಕ್ಕಿಳಿದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ ಮ್ಯಾಚ್‌ ರೆಫ್ರಿ ಆ್ಯಂಡಿ ಪೈಕ್ರಾಫ್ಟ್, ಹಸರಂಗ ಅವರಿಗೆ ಪಂದ್ಯದ ಸಂಭಾವನೆಯ ಶೇ. 50ರಷ್ಟು ದಂಡ ವಿಧಿಸುವ ಜತೆಗೆ 3 ಡಿಮೆರಿಟ್‌ ಅಂಕವನ್ನೂ ನೀಡಿದರು. ಹಸರಂಗ ಅವರ ಡಿಮೆರಿಟ್‌ ಅಂಕವೀಗ 8ಕ್ಕೆ ಏರಿದ ಕಾರಣ 2 ಟೆಸ್ಟ್‌ ಪಂದ್ಯಗಳ ನಿಷೇಧಕ್ಕೊಳಗಾಗಬೇಕಾಯಿತು. ಹೀಗಾಗಿ ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿಯಿಂದ ಹೊರಬೀಳುವುದು ಅನಿವಾರ್ಯವಾಗಿದೆ. ವನಿಂದು ಹಸರಂಗ ಈವರೆಗೆ ಆಡಿದ್ದು 4 ಟೆಸ್ಟ್‌ ಮಾತ್ರ.

ಟೆಸ್ಟ್‌ ತಂಡಕ್ಕೆ ಆಯ್ಕೆಯಾದ ಕಾರಣ ಸನ್‌ರೈಸರ್ ಹೈದರಾಬಾದ್‌ ತಂಡದ ಸದಸ್ಯ ವನಿಂದು ಹಸರಂಗ ಮೊದಲ 3 ಐಪಿಎಲ್‌ ಪಂದ್ಯಗಳಿಂದ ಹೊರಗುಳಿಯಲು ನಿರ್ಧರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next