Advertisement

ದೀಪಕ್‌ ಅಗರ್ವಾಲ್‌ಗೆ ನಿಷೇಧ

12:13 PM Apr 30, 2020 | mahesh |

ಹೊಸದಿಲ್ಲಿ: ಸದ್ಯ ಸಾಗುತ್ತಿರುವ ಭ್ರಷ್ಟಾಚಾರ ತನಿಖೆಗೆ ಅಡ್ಡಿಪಡಿಸಿದ್ದನ್ನು ಒಪ್ಪಿಕೊಂಡ ಭಾರತೀಯ ಉದ್ಯಮಿ ದೀಪಕ್‌ ಅಗರ್ವಾಲ್‌ ಅವರನ್ನು ಬುಧವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ನಿಷೇಧ ಹೇರಿದೆ. ಅವರು ಯುಎಇಯಲ್ಲಿ 2018ರಲ್ಲಿ ನಡೆದ ಟಿ10 ಲೀಗ್‌ನಲ್ಲಿ ಒಂದು ಫ್ರಾಂಚೈಸಿಯ ಮಾಲಕರಾಗಿದ್ದರು. ಭ್ರಷ್ಟಾಚಾರ ವಿರೋಧಿ ನಿಯಮ ಉಲ್ಲಂಘಿಸಿರುವುದನ್ನು ಒಪ್ಪಿಕೊಂಡ ಬಳಿಕ ತನಿಖೆಗೆ ಸಹಕಾರ ನೀಡುವ ಕೊಡುಗೆ ನೀಡಿದ್ದರಿಂದ ಅವರಿಗೆ ಎರಡು ವರ್ಷ ನಿಷೇಧ ಹೇರಲಾಗಿದ್ದು ಇದರಲ್ಲಿ ಆರು ತಿಂಗಳು ಅಮಾನತುಗೊಂಡ ಶಿಕ್ಷೆಯಾಗಿರುತ್ತದೆ. 2018ರ ಲೀಗ್‌ ಕೂಟದ ವೇಳೆ ನ್ಯಾಯವಲ್ಲದ ಚಟುಟವಟಿಕೆಯಲ್ಲಿ ಪಾಲ್ಗೊಂಡ ಆರೋಪ ದೀಪಕ್‌ ಅವರ ಮೇಲೆ ಇತ್ತು. ದೀಪಕ್‌ ಅವರು ಕೆಲವು ಸಮಯದವರೆಗೆ ಟಿ10 ಸಿಂಧಿಸ್‌ ತಂಡದ ಮಾಲಕರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next