Advertisement

ನಿಮಗೆ ಬುಕಿಗಳಿಂದ ಆಮಿಷ ಬಂದಿತ್ತಾ?: ಮಿಥಾಲಿಗೆ ಐಸಿಸಿ ಪ್ರಶ್ನೆ

06:45 AM Apr 24, 2018 | Team Udayavani |

ಕೋಲ್ಕತಾ: ನಿಮಗೆ ಯಾವತ್ತಾದರೂ ಬುಕಿಗಳಿಂದ ಆಮಿಷ ಬಂದಿದೆಯಾ? ಇದು ಭಾರತ ಮಹಿಳಾ ಏಕದಿನ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ಗೆ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ಅಧಿಕಾರಿಗಳು ಕೇಳಿದ ಪ್ರಶ್ನೆ. ಕೋಲ್ಕತಾದಲ್ಲಿ ನಡೆಯುತ್ತಿರುವ ಐಸಿಸಿಯ ಐದು ದಿನಗಳ ಸಭೆಯಲ್ಲಿ ಈ ಅಚ್ಚರಿಯ ಪ್ರಶ್ನೆಯೊಂದನ್ನು ಮಿಥಾಲಿ ಎದುರಿಸಿದರು. ಐಸಿಸಿ ಪ್ರಶ್ನೆಗೆ ಮಿಥಾಲಿ ಇಲ್ಲ, ನನಗೆ ಅಂತಹ ಅನುಭವಗಳು ಆಗಿಲ್ಲ ಎಂದುತ್ತರಿಸಿದ್ದಾರೆ.

Advertisement

ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಮ್ಯಾಚ್‌ಫಿಕ್ಸಿಂಗ್‌ ಪೆಡಂಭೂತವಾಗಿ ಬೆಳೆದಿರುವುದರಿಂದ ಮಹಿಳಾ ತಂಡಗಳ ಪರಿಸ್ಥಿತಿಯನ್ನೂ ಐಸಿಸಿ ಪರಿಶೀಲಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತ ಮಹಿಳಾ ಕ್ರಿಕೆಟಿಗರ ಪ್ರತಿನಿಧಿಯಾಗಿ ಭಾಗವಹಿಸಿದ್ದ ಮಿಥಾಲಿಗೆ ಈ ಪ್ರಶ್ನೆ ಎದುರಾಯಿತು. ಮಿಥಾಲಿಗೂ ಮುನ್ನ 19 ವಯೋಮಿತಿಯೊಳಗಿನ ಭಾರತ ಮಹಿಳಾ ತಂಡವೂ ಐಸಿಸಿಯಿಂದ ಈ ಪ್ರಶ್ನೆಯನ್ನು ಎದುರಿಸಿತು. ಮಹಿಳಾ ಕ್ರಿಕೆಟ್‌ ಈಗ ಜನಪ್ರಿಯತೆ ಗಳಿಸುತ್ತಿರುವುದರಿಂದ ಸಂಭಾವ್ಯ ಅಪಾಯ ತಡೆಯಲು ಐಸಿಸಿ ಈಗಲೇ ಮುನ್ನೆಚ್ಚರಿಕೆ ವಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next