ದುಬೈ: ಟಿ20 ವಿಶ್ವಕಪ್ 2022ರ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಎದುರಿಸಲಿದೆ. ಅಕ್ಟೋಬರ್ 23ರಂದು ಮೆಲ್ಬೋರ್ನ್ ನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಕೂಟದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆತಿಥೇಯ ಆಸ್ಟ್ರೇಲಿಯಾ ತಂಡವು ನ್ಯೂಜಿಲ್ಯಾಂಡ್ ನ್ನು ಎದುರಿಸಲಿದೆ.
ಸೂಪರ್ 12 ವಿಭಾಗದಲ್ಲಿ ಎರಡು ಗುಂಪು ಮಾಡಿದ್ದು, ಮೊದಲ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಅಫ್ಘಾನಿಸ್ಥಾನ ಇದ್ದರೆ, ಎರಡನೇ ಗುಂಪಿನಲ್ಲಿ ಭಾರತ, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳಿವೆ.
ಭಾರತದ ನಂತರದ ಪಂದ್ಯಗಳು ಅ.27ರಂದು ಮೊದಲ ಹಂತದ ಗ್ರೂಪ್ ಎ ರನ್ನರ್ ಅಪ್ ವಿರುದ್ಧ, ಅ.30ರಂದು ದಕ್ಷಿಣ ಆಫ್ರಿಕಾ ವಿರುದ್ಧ, ನ.2ರಂದು ಬಾಂಗ್ಲಾದೇಶ ವಿರುದ್ಧ ಮತ್ತು ನ.6ರಂದು ಮೊದಲ ಹಂತದ ಗ್ರೂಪ್ ಬಿ ವಿನ್ನರ್ ವಿರುದ್ಧ ನಡೆಯಲಿದೆ.
ಇದನ್ನೂ ಓದಿ:ಇಂದು ದ್ವಿತೀಯ ಏಕದಿನ: ಭಾರತದ ಮೇಲೆ ಸರಣಿ ಸಮಬಲ ಒತ್ತಡ
ನ.9 ಮತ್ತು 10ರಂದು ಸಿಡ್ನಿ ಮತ್ತು ಅಡಿಲೇಡ್ ಓವಲ್ ನಲ್ಲಿ ಎರಡು ಸೆಮಿ ಫೈನಲ್ ಪಂದ್ಯಗಳು ನಡೆಯಲಿದೆ. ನ.13ರಂದು ಮೆಲ್ಬೋರ್ನ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಸಂಪೂರ್ಣ ವೇಳಾಪಟ್ಟಿ ವಿವರ