ದುಬೈ: ಐಸಿಸಿ ಟಿ 20 ವಿಶ್ವಕಪ್ ಕೂಟಕ್ಕೆ ಇನ್ನು ಎರಡು ತಿಂಗಳು ಬಾಕಿಯಿದೆ. ಐಸಿಸಿ ಈಗಾಗಲೇ ಇದರ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಕೆಲವೊಂದು ಮಾರ್ಗಸೂಚಿಗಳನ್ನು ಐಸಿಸಿ ಬಿಡುಗಡೆ ಮಾಡಿದ್ದು, ಒಂದು ತಂಡದಲ್ಲಿ 15 ಮಂದಿ ಆಟಗಾರರು ಮತ್ತು ಎಂಟು ಅಧಿಕಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಈ ಬಗ್ಗೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಅಧಿಕೃತ ಮಾಹಿತಿ ನೀಡಿದೆ. ಸೆಪ್ಟೆಂಬರ್ 10 ರೊಳಗೆ ಭಾಗವಹಿಸುವ ತಂಡಗಳು ತಮ್ಮ 15 ಆಟಗಾರರ ಪಟ್ಟಿ ಮತ್ತು ಕೋಚ್, ಸಹಾಯಕ ಸಿಬ್ಬಂದಿ ಸೇರಿ ಎಂಟು ಅಧಿಕಾರಿಗಳ ಪಟ್ಟಿಯನ್ನು ನೀಡಬೇಕು ಎಂದು ಐಸಿಸಿ ಸೂಚಿಸಿದೆ.
ಒಂದು ತಂಡದಲ್ಲಿ ಕೇವಲ 15 ಆಟಗಾರರಿಗೆ ಮಾತ್ರ ಐಸಿಸಿ ಖರ್ಚು ಒದಗಿಸುತ್ತದೆ. ಒಂದು ವೇಳೆ ಹೆಚ್ಚುವರಿ ಆಟಗಾರರಿದ್ದರೆ ಅವರ ಖರ್ಚನ್ನು ಆ ದೇಶವೇ ಭರಿಸಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ:ಮಾನ್ಸೂನ್ ಮಳೆಯಲ್ಲಿ ಮಿಂದೆದ್ದ ಧನಂಜಯ್-ರಚಿತಾ: ಬೋಲ್ಡ್ ಪಾತ್ರದಲ್ಲಿ ಡಿಂಪಲ್ ಕ್ವೀನ್
2016ರ ಬಳಿಕ ಮೊದಲ ಬಾರಿ ಟಿ20 ವಿಶ್ವಕಪ್ ನಡೆಯುತ್ತಿದೆ. ಕಳೆದ ವರ್ಷ ಭಾರತದಲ್ಲಿ ನಡೆಯಬೇಕಿದ್ದ ಈ ಕೂಟ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿತ್ತು. ಈ ಬಾರಿ ಯುಎಇ ಮತ್ತು ಒಮಾನ್ ನಲ್ಲಿ ಬಿಸಿಸಿಐ ನ ಪ್ರಾಯೋಜತ್ವದಲ್ಲಿ ನಡೆಯುತ್ತಿದೆ. ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಕೂಟ ನಡೆಯಲಿದೆ.