Advertisement

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

11:49 AM Sep 29, 2024 | Team Udayavani |

ರಕ್ಷಿತ್‌ ಶೆಟ್ಟಿ ನಿರ್ಮಾಣದ “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರ (Ibbani Tabbida Ileyali) ಸೆ.5ರಂದು ತೆರೆಕಂಡಿತ್ತು. ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನದ ಹಾಗೂ ವಿಹಾನ್‌, ಅಂಕಿತಾ ಅಮರ್‌, ಮಯೂರಿ ನಟರಾಜ್‌ ಅಭಿನಯದ ಪ್ರೇಮಕಾವ್ಯಕ್ಕೆ ಮೆಚ್ಚುಗೆ ಸಿಗುವ ಮೂಲಕ ಚಿತ್ರತಂಡ ಖುಷಿಯಾಗಿದೆ.

Advertisement

ಬಿಡುಗಡೆಯ ಸಮಯದಲ್ಲಿ ಕಡಿಮೆ ಸ್ಕ್ರೀನ್‌ ಗಳಲ್ಲಿ ಈ ಚಿತ್ರ ತೆರೆ ಕಂಡಿತ್ತು. ಆನಂತರ ಜನರೇ ಈ ಚಿತ್ರವನ್ನು ಮೆಚ್ಚುವ ಮೂಲಕ ಹೆಚ್ಚು ಪ್ರಚಾರ ಮಾಡಲು ಆರಂಭಿಸಿದರು. ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬರಲು ಆರಂಭಿಸಿದರು. ಜನರು ಚಿತ್ರಕ್ಕೆ ತೋರುತ್ತಿರುವ ಪ್ರೀತಿಗೆ ಚಿತ್ರತಂಡ ಖುಷಿಯಾಗಿದೆ. ಮೊದಲ ವಾರ ಐವತ್ತರ ಆಸುಪಾಸಿನ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಮೂರನೇ ವಾರದಲ್ಲಿ ಕರ್ನಾಟಕದಾದ್ಯಂತ ಇನ್ನೂರು ಸ್ಕ್ರೀನ್‌ ಗಳಲ್ಲಿ ಪ್ರದರ್ಶನವಾಗುತ್ತಿದೆ.

ಸಿನಿಮಾ ಬಗ್ಗೆ ಹೇಳಬೇಕಾದರೆ ಇಬ್ಬನಿ ತಬ್ಬಿದ ಇಳೆಯಲಿ ಒಂದು ಪರಿಶುದ್ಧ ಪ್ರೇಮಕಥೆ. ಈ ಕಥೆಗೆ ಅದೆಷ್ಟು ಭಾವನೆಗಳನ್ನು ತುಂಬಿ ಹೇಳಬಹುದಿತ್ತೋ, ಆ ಎಲ್ಲಾ ಸಾಧ್ಯತೆಗಳನ್ನು ನಿರ್ದೇಶಕರು ಮಾಡಿದ್ದಾರೆ. ಇಲ್ಲಿ ಕಾಲೇಜು ಕ್ಯಾಂಪಸ್‌ ಇದೆ, ಬೆಂಗಾಲಿ ಹುಡುಗಿಯ ಕನ್ನಡ ಪ್ರೀತಿ ಇದೆ, ಕ್ರಿಕೆಟಿಗನಾಗಬೇಕೆಂಬ ಕನಸೊಂದು ಕೈ ಜಾರುವ ಸನ್ನಿವೇಶವಿದೆ, ಹೆಣ್ಣೊಬ್ಬಳ ಹಸೆಮಣೆ ಕನಸೊಂದು ದೊಪ್ಪನೇ ಕುಸಿದು ಬೀಳುವ ಸಂಕಟವಿದೆ, ಜೊತೆಗೆ ಅವೆಲ್ಲವನ್ನು ಮೀರಿ ನಗೆ ಬೀರುವ ಮಾನವೀಯ ಗುಣವಿದೆ.. ಇವೆಲ್ಲದರ ಒಟ್ಟು ಸಮ್ಮಿಲನವೇ “ಇಬ್ಬನಿ ತಬ್ಬಿದ ಇಳೆಯಲಿ’.

ಚಿತ್ರದ ಶೀರ್ಷಿಕೆಯಂತೆ ಇಡೀ ಸಿನಿಮಾ ಸುಂದರವಾಗಿದೆ. ಸಿನಿಮಾವೆಂದರೆ ಕಮರ್ಷಿಯಲ್‌, ಎಲ್ಲವನ್ನು ಬೇಗನೇ ಹೇಳಬೇಕು ಎಂಬ ಯಾವ ಮುಲಾಜಿಗೂ ಬೀಳದೇ ಇಡೀ ಸಿನಿಮಾವನ್ನು ಒಂದು ಕಾಡುವ ಕಾವ್ಯದಂತೆ ಕಟ್ಟಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next