Advertisement

ಇಬಾದತ್‌ ಮತ್ತು ಮಿಲಿಟರಿ ಸೆಲ್ಯೂಟ್‌

09:54 AM Nov 25, 2019 | Team Udayavani |

ಕೋಲ್ಕತಾ: ವೆಸ್ಟ್‌ ಇಂಡೀಸ್‌ ಬೌಲರ್‌ ಶೆಲ್ಡನ್‌ ಕಾಟ್ರೆಲ್‌ ವಿಕೆಟ್‌ ಉರುಳಿಸಿದ ಬಳಿಕ “ಮಿಲಿಟರಿ ಸೆಲ್ಯೂಟ್‌’ ಹೊಡೆಯುತ್ತಿರುವುದನ್ನು ಎಲ್ಲರೂ ಕಂಡಿದ್ದಾರೆ. ಅವರು ಹಿಂದೆ ಸೇನೆಯಲ್ಲಿ ದುಡಿಯುತ್ತಿದ್ದುದೇ ಇದಕ್ಕೆ ಕಾರಣ. ಈಗ ಬಾಂಗ್ಲಾದೇಶದ ಬಲಗೈ ವೇಗಿ ಇಬಾದತ್‌ ಹೊಸೈನ್‌ ಸರದಿ. ಇದಕ್ಕೂ ಅವರ ಸೇನಾಪ್ರೀತಿಯೇ ಕಾರಣ.

Advertisement

“ನಾನು ಕಳೆದ ಐದೂವರೆ ವರ್ಷ ಗಳಿಂದ ಬಾಂಗ್ಲಾದೇಶದ ಏರ್‌ ಫೋರ್ಸ್‌ ನಲ್ಲಿದ್ದೇನೆ. ಪ್ರಮುಖ ವಿಕೆಟ್‌ ಉರುಳಿ ಸಿದ ಬಳಿಕ ನಾನು ನೀಡುವ ಸೆಲ್ಯೂಟ್‌ ಅಲ್ಲಿನ ಯೋಧರಿಗೆ ಸಲ್ಲಿಸುವ ಗೌರವ’ ಎಂಬುದಾಗಿ ಇಬಾದತ್‌ ತಿಳಿಸಿದ್ದಾರೆ.

“ಮೊದಲೆಲ್ಲ ವಿಕೆಟ್‌ ಉರುಳಿಸಿದಾಗ ನಾನು ವಿಶೇಷ ಸಂಭ್ರಮಾಚರಣೆ ಮಾಡುತ್ತಿರಲಿಲ್ಲ. ಒಮ್ಮೆ ಸಹ ಆಟಗಾರ ಮಹಮದುಲ್ಲ ಇಂಥದೊಂದು ಸಲಹೆ ನೀಡಿದರು. ವಿಕೆಟ್‌ ಉರುಳಿಸುವುದು ಕೂಡ ಸೇನೆಯ ಒಂದು ಭಾಗವೆಂದೇ ತಿಳಿದು ಸೆಲ್ಯೂಟ್‌ ಹೊಡೆಯುವಂತೆ ಸೂಚಿಸಿದರು. ನನಗೂ ಇದು ಹೌದೆನಿಸಿತು’ ಎಂದು ಇಬಾದತ್‌ ಸೆಲ್ಯೂಟ್‌ ಹಿನ್ನೆಲೆಯನ್ನು ಬಿಚ್ಚಿಟ್ಟರು.

ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ರೋಹಿತ್‌ ಶರ್ಮ ಮತ್ತು ವಿರಾಟ್‌ ಕೊಹ್ಲಿ ವಿಕೆಟ್‌ ಉರುಳಿಸಿದ ಸಾಧನೆ ಇಬಾದತ್‌ ಅವರದಾಗಿತ್ತು. “ಕೊಹ್ಲಿ ಮತ್ತು ರೋಹಿತ್‌ ಇಬ್ಬರೂ ವಿಶ್ವ ದರ್ಜೆಯ ಬ್ಯಾಟ್ಸ್‌ಮನ್‌ಗಳು. ಭಾರತದೆದುರು ಆಡಿದ ಮೊದಲ ಟೆಸ್ಟ್‌ನಲ್ಲೇ ಇವರ ವಿಕೆಟ್‌ ಉರುಳಿಸಿದ್ದು ನಿಜಕ್ಕೂ ಅವಿಸ್ಮರಣೀಯ’ ಎಂದು ಇಬಾದತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next