Advertisement

CBFC ವಿರುದ್ಧ ನಟ ವಿಶಾಲ್ ಲಂಚ ಆರೋಪ: ತನಿಖೆಗೆ I&B ಸಚಿವಾಲಯ ಆದೇಶ

03:41 PM Sep 29, 2023 | Team Udayavani |

ಚೆನ್ನೈ : CBFC ವಿರುದ್ಧ ತಮಿಳು ನಟ, ನಿರ್ಮಾಪಕ ವಿಶಾಲ್ ಅವರ ಲಂಚ ಕೇಳಿದ ಆರೋಪಕ್ಕೆ ಸಂಬಂಧಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನಿಖೆಗೆ ಶುಕ್ರವಾರ ಆದೇಶಿಸಿದೆ.

Advertisement

ವಿಶಾಲ್ ಅವರು ತಮ್ಮ ಇತ್ತೀಚೆಗೆ ಬಿಡುಗಡೆಯಾದ ‘ಮಾರ್ಕ್ ಆಂಟನಿ’ಯ ಹಿಂದಿ ಸೆನ್ಸಾರ್ ಹಕ್ಕುಗಳಿಗಾಗಿ 6.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿರುವುದಾಗಿ ಸೆಂಟ್ರಲ್ ಬ್ಯೂರೋ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಮುಂಬೈ ಕಚೇರಿಯ ವಿರುದ್ಧ ಆರೋಪಿಸಿದ್ದರು.

ವಿಡಿಯೋ ಟಿಪ್ಪಣಿಯಲ್ಲಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಹಾಯ ಕೋರಿದ್ದರು. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇದೀಗ ವಿಶಾಲ್ ಅವರ ಭ್ರಷ್ಟಾಚಾರ ಆರೋಪಗಳಿಗೆ X ನಲ್ಲಿ ಅಧಿಕೃತ ಹೇಳಿಕೆಯ ಮೂಲಕ ಪ್ರತಿಕ್ರಿಯಿಸಿದೆ.

‘ನಟ ವಿಶಾಲ್ ಅವರು CBFC ಯಲ್ಲಿನ ಭ್ರಷ್ಟಾಚಾರದ ಕುರಿತು ಹೇಳಿಕೊಂಡಿರುವವಿಷಯ ಅತ್ಯಂತ ದುರದೃಷ್ಟಕರವಾಗಿದೆ. ಸರಕಾರವು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರನ್ನು ವಿಚಾರಣೆ ನಡೆಸಲು ನಿಯೋಜಿಸಲಾಗಿದೆ. CBFC ನಿಂದ ಯಾವುದೇ ಕಿರುಕುಳದ ಇತರ ನಿದರ್ಶನಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ಮೂಲಕ ಸಚಿವಾಲಯದೊಂದಿಗೆ ಸಹಕರಿಸಲು ನಾವು ಪ್ರತಿಯೊಬ್ಬರನ್ನು ವಿನಂತಿಸುತ್ತೇವೆ’ ಎಂದು ಎಕ್ಸ್ ಪೋಸ್ಟ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next