Advertisement

ದಾಂಪತ್ಯ ಜೀವನಕ್ಕೆ ಐಎಎಸ್‌ ಟಾಪರ್ಸ್‌

07:00 AM Apr 10, 2018 | |

ನವದೆಹಲಿ: 2015ರಲ್ಲಿ ಐಎಎಸ್‌ನಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಿದ್ದ ಹಾಗೂ ಎರಡನೇ ರ್‍ಯಾಂಕ್‌ ಗಳಿಸಿದ್ದ ಟೀನಾ ದಬಿ ಮತ್ತು ಅಮೀರ್‌ ಇಲ್‌ ಶಫಿ ಖಾನ್‌ ಇದೀಗ ದಾಂಪತ್ಯದ ಹೊಸ್ತಿಲಿಗೆ ಕಾಲಿಟ್ಟಿದ್ದಾರೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಪಡಸಾಲೆಯಲ್ಲಿ ಅರಳಿದ ಪ್ರೇಮ ಈಗ ಅವರನ್ನು ಒಂದಾಗಿಸಿದೆ. ಜಮ್ಮು ಕಾಶ್ಮೀರದ ಅಮೀರ್‌ ಹುಟ್ಟೂರಿನಲ್ಲಿ ಶನಿವಾರ ವಿವಾಹ ಕಾರ್ಯಕ್ರಮ ನೆರವೇರಿದೆ. 2015ರಲ್ಲಿ ಪ್ರಥಮ ರ್‍ಯಾಂಕ್‌ ಗಳಿಸಿದಾಗ ದೆಹಲಿಯಲ್ಲಿನ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ರ್‍ಯಾಂಕ್‌ ಗಳಿಸಿದವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆಗ ಇಬ್ಬರೂ ಭೇಟಿಯಾಗಿದ್ದು, ಪರಿಚಯವಾಗಿತ್ತು. ಆರಂಭದಲ್ಲಿ ಟೀನಾ ದಬಿಯ ಮನೆಯವರು  ವಿವಾಹ ವನ್ನು ವಿರೋಧಿಸಿದ್ದರಾದರೂ, ಈಗ ಒಪ್ಪಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next