Advertisement

ಸ್ಟೇಡಿಯಂನಲ್ಲಿ ನಾಯಿಯೊಂದಿಗೆ ವಾಕಿಂಗ್ ಮಾಡಿದ ದೆಹಲಿ ಅಧಿಕಾರಿ ಲಡಾಖ್ ಗೆ ವರ್ಗಾವಣೆ

08:27 AM May 27, 2022 | Team Udayavani |

ಹೊಸದಿಲ್ಲಿ: ತನ್ನ ನಾಯಿಯನ್ನು ವಾಕಿಂಗ್ ಮಾಡಿಸಲು ದೆಹಲಿಯ ಕ್ರೀಡಾಂಗಣದಲ್ಲಿ ಕ್ರೀಡಾಳುಗಳನ್ನು ತೆರವುಗೊಳಿಸಿದ ಅಧಿಕಾರಿ ಸಂಜೀವ್ ಖಿರ್ವಾರ್ ಅವರನ್ನು ಲಡಾಖ್‌ ಗೆ ವರ್ಗಾಯಿಸಲಾಗಿದೆ. ಅವರ ಪತ್ನಿ ರಿಂಕು ದುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ

Advertisement

ಭಾರತೀಯ ಆಡಳಿತ ಸೇವೆಗಳ ಅಧಿಕಾರಿಯು ದೆಹಲಿಯ ತ್ಯಾಗರಾಜ್ ಸ್ಟೇಡಿಯಂ ಅನ್ನು ತನ್ನ ನಾಯಿಯನ್ನು ವಾಕಿಂಹ್ ಮಾಡಿಸಲು ಖಾಲಿ ಮಾಡಿದ ಮಾಧ್ಯಮ ವರದಿಗಳ ನಂತರ ಗೃಹ ವ್ಯವಹಾರಗಳ ಸಚಿವಾಲಯದ (ಎಂಎಚ್ ಎ) ಆದೇಶ ಬಂದಿದೆ.

ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ಅವರು ತ್ಯಾಗರಾಜ್ ಕ್ರೀಡಾಂಗಣದಲ್ಲಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಸುದ್ದಿ ವರದಿಯ ಕುರಿತು ಎಂಎಚ್ ಎ ದೆಹಲಿಯ ಮುಖ್ಯ ಕಾರ್ಯದರ್ಶಿಯಿಂದ ವರದಿಯನ್ನು ಕೇಳಿದೆ. ಸಂಜೀವ್ ಖಿರ್ವಾರ್ ಅವರನ್ನು ಲಡಾಖ್‌ಗೆ ಮತ್ತು ರಿಂಕು ಧುಗ್ಗಾ ಅವರನ್ನು ಅರುಣಾಚಲ ಪ್ರದೇಶಕ್ಕೆ ಎಂಎಚ್‌ಎ ವರ್ಗಾಯಿಸಿದೆ. ವರದಿಯ ಆಧಾರದ ಮೇಲೆ ಅಗತ್ಯ ಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಮೂಲಗಳು ಹೇಳಿವೆ.

ಕ್ರೀಡಾಂಗಣದಲ್ಲಿ ತರಬೇತಿ ಪಡೆಯುವ ಕ್ರೀಡಾಪಟುಗಳು ಮತ್ತು ತರಬೇತುದಾರರು ಎಂದಿಗಿಂತಲೂ ಮುಂಚಿತವಾಗಿ, ಸಂಜೆ 7 ಗಂಟೆಗೆ ತರಬೇತಿಯನ್ನು ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಬಳಿಕ ಸಂಜೀವ್ ಖಿರ್ವಾರ್ ಮತ್ತು ಅವರ ಪತ್ನಿ ರಿಂಕು ದುಗ್ಗಾ ತಮ್ಮ ಪತ್ನಿಯೊಂದಿಗೆ ಸ್ಟೇಡಿಯಂನಲ್ಲಿ ವಾಕಿಂಗ್ ನಡೆಸಿದ್ದರು.

ಆದರೆ, ಕ್ರೀಡಾಂಗಣದ ಆಡಳಿತಾಧಿಕಾರಿ ಅಜಿತ್ ಚೌಧರಿ ಅವರು ಅಥ್ಲೀಟ್‌ಗಳ ಆರೋಪವನ್ನು ಅಲ್ಲಗಳೆದಿದ್ದಾರೆ. ಅಥ್ಲೀಟ್‌ಗಳಿಗೆ ತರಬೇತಿ ನೀಡಲು ಅಧಿಕೃತ ಸಮಯ ಸಂಜೆ 7 ಗಂಟೆಯವರೆಗೆ ಇದ್ದು, ನಂತರ ತರಬೇತುದಾರರು ಮತ್ತು ಕ್ರೀಡಾಪಟುಗಳು ತೆರಳುತ್ತಾರೆ ಎಂದು ಅವರು ಹೇಳಿದರು.

Advertisement

ಇದನ್ನೂ ಓದಿ:2 ವರ್ಷಗಳಲ್ಲೇ ಪ್ರತ್ಯಕ್ಷವಾಗಲಿದ್ದಾನೆ “ರಸ್ತೆಗಳ ರಾಜ’ : ಅಂಬಾಸಿಡರ್‌ 2.0

ಐಎಎಸ್ ಅಧಿಕಾರಿಯ ಕ್ರಮಗಳ ಬಗ್ಗೆ ಅಂತರ್ಜಾಲದಲ್ಲಿ ಭಾರೀ ಆಕ್ರೋಶದ ನಂತರ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯ ಎಲ್ಲಾ ಕ್ರೀಡಾಂಗಣಗಳನ್ನು ಆಟಗಾರರು ಮತ್ತು ಅವರ ತರಬೇತುದಾರರಿಗೆ ರಾತ್ರಿ 10 ರವರೆಗೆ ತೆರೆದಿರಲು ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next