Advertisement

ಐಎಎಸ್‌ಗೆ ಅರ್ಜಿ ಹಾಕಿದರೂ ಪರೀಕ್ಷೆ ಬರೆದಂತೆ!

12:30 AM Jan 05, 2019 | Team Udayavani |

ಹೊಸದಿಲ್ಲಿ: ಐಎಎಸ್‌ಗೆ ಇನ್ನು ಅರ್ಜಿ ಸಲ್ಲಿಸಿದರೆ ಸಾಕು. ನೀವು ಪರೀಕ್ಷೆ ಬರೆದಿದ್ದೀರಿ ಎಂದೇ ಪರಿಗಣಿಸಲಾಗುತ್ತದೆ! ಇಂಥ ಪ್ರಸ್ತಾವನೆಯನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸರಕಾರದ ಮುಂದಿಟ್ಟಿದೆ. ಬಹುತೇಕ ಐಎಎಸ್‌ ಸೇರಿ ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಅರ್ಜಿ ಸಲ್ಲಿಸಿದವರ ಪೈಕಿ ಕೇವಲ ಅರ್ಧದಷ್ಟು ಜನರು ಪರೀಕ್ಷೆ ಬರೆಯುತ್ತಾರೆ. ಕಳೆದ ಪರೀಕ್ಷೆಯಲ್ಲಿ ಒಂಬತ್ತು ಲಕ್ಷ ಜನರು ಅರ್ಜಿ ಸಲ್ಲಿಸಿದ್ದರೆ, ಅರ್ಧದಷ್ಟು ಜನರು ಮಾತ್ರ ಪರೀಕ್ಷೆ ಬರೆದಿದ್ದಾರೆ. ಲೋಕಸೇವಾ ಆಯೋಗದ ಪರೀಕ್ಷೆ ಬರೆಯಲು ಆರು ಬಾರಿ ಅವಕಾಶ ನೀಡಲಾಗುತ್ತದೆ. ಹೀಗಾಗಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯದೇ ಇದ್ದರೆ, ಒಂದು ಅವಕಾಶವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಈ ನಿಯಮ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಅನ್ವಯಿಸುವುದಿಲ್ಲ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next