Advertisement
96 ವಿಮಾನ ನಮ್ಮಲ್ಲೇ ತಯಾರುಮಲ್ಟಿರೋಲ್ ಫೈಟರ್ ಏರ್‌ಕ್ರಾಫ್ಟ್ (ಎಂಆರ್‌ಎಫ್ಎ) ಮಾದರಿಯ 114 ವಿಮಾನಗಳಲ್ಲಿ 96 ವಿಮಾನಗಳನ್ನು ಭಾರತದಲ್ಲಿ ಹಾಗೂ ಉಳಿದ 18 ವಿಮಾನಗಳನ್ನು ಈ ಒಪ್ಪಂದದಲ್ಲಿ ಭಾಗಿಯಾಗುವ ಕಂಪೆನಿಗಳು ತಮ್ಮ ದೇಶಗಳಲ್ಲಿ ತಯಾರಿಸಲು ಅವಕಾಶ ನೀಡಲಾಗುತ್ತದೆ.
ಈ ಕುರಿತಂತೆ ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ವಿವಿಧ ದೇಶಗಳ ಫೈಟರ್ ಜೆಟ್ ತಯಾರಿಕ ಕಂಪೆನಿಗಳ ಪ್ರತಿನಿಧಿಗಳ ಜತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆ ವೇಳೆ, ಭಾರತವು ಯುದ್ಧ ಸಲಕರಣೆಗಳ ತಯಾರಿಕೆಯಲ್ಲಿ ಆತ್ಮನಿರ್ಭರತೆ ಸಾಧಿಸುವ ಗುರಿಯನ್ನು ಹೊಂದಿರುವ ವಿಚಾರವನ್ನು ಕಂಪೆನಿಗಳ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.