Advertisement

ಐಎಎಫ್ ಎಎನ್‌-32 ರಕ್ಷಣಾ ಅಭಿಯಾನಕ್ಕೆ 15 ಪರ್ವತಾರೋಹಿಗಳ ಸಾಥ್‌

10:10 AM Jun 13, 2019 | Sathish malya |

ಹೊಸದಿಲ್ಲಿ : ಕಳೆದ ಜೂನ್‌ 3ರಂದು ಅಸ್ಸಾಂ ನ ಜೋರ್ಹಾಟ್‌ ವಾಯು ನೆಲೆಯಿಂದ ಟೇಕಾಫ್ ಆದ ಅರ್ಧ ತಾಸೊಳಗೆ ನಾಪತ್ತೆಯಾಗಿ ಅರುಣಾಚಾಲ ಪ್ರದೇಶದ ಲಿಪೋ ಸಮೀಪದ ದುರ್ಗಮ, ಕಡಿದಾದ, ಎತ್ತರದ ಪರ್ವತ ಪ್ರದೇಶದಲ್ಲಿ ಪತನಗೊಂಡ  IAF  AN-32 ವಿಮಾನದ ಅವಶೇಷಗಳು ಪತ್ತೆಯಾದ ತಾಣವನ್ನು ತಲುಪಿ ಬದುಕುಳಿದಿರಬಹುದಾದವರನ್ನು ಪಾರು ಮಾಡುವ ಕಾರ್ಯಾಚರಣೆಯಲ್ಲಿ ಐಎಎಫ್ ತಂಡಕ್ಕೆ 15 ಮಂದಿ ಪರ್ವತಾರೋಹಿಗಳು ಸಾಥ್‌ ನೀಡುತ್ತಿದ್ದಾರೆ.

Advertisement

ಒಂದು ದಿನದ ಹಿಂದಷ್ಟೇ ವಾಯು ಪಡೆಯ ಎಎನ್‌-32 ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಲಾಗಿತ್ತು. ಆದರೆ ವಿಮಾನ ಪತನದ ತಾಣಕ್ಕೆ ಇಳಿಯುವ ಐಎಎಫ್ ಮತ್ತು ಸೇನೆಯ ಲಘು ಹೆಲಿಕಾಪ್ಟರ್‌ಗಳ ಯತ್ನ ನಿನ್ನೆ ಮಂಗಳವಾರ ಪೂರ್ತಿ ಕೈಗೂಡಿರಲಿಲ್ಲ. ಅಂತೆಯೇ ಇಂದು ಬುಧವಾರವೂ ಆ ಯತ್ನವನ್ನು ಮುಂದುವರಿಸಲಾಗಿತ್ತು.

ಇಂದು ಬುಧವಾರ ಐಎಎಫ್ ತನ್ನ 9 ರಕ್ಷಣಾ ಸಿಬಂದಿಗಳನ್ನು ಯಶಸ್ವಿಯಾಗಿ ವಿಮಾನ ಅವಶೇಷ ಪತ್ತೆಯಾದ ದುರ್ಗಮ, ಕಡಿದಾದ ಪರ್ವತ ತಾಣದಲ್ಲಿ ಇಳಿಸುವಲ್ಲಿ ಸಫ‌ಲವಾಯಿತು.

ಐಎಎಫ್ ತಂಡಕ್ಕೆ ನೆರವಾಗಲು ಮುಂದೆ ಬಂದಿರುವ 15 ಪರ್ವತಾರೋಹಿಗಳಲ್ಲಿ ಕೆಲವರು ಈಗಾಗಲೇ ವಿಮಾನ-ಪತನ ತಾಣವನ್ನು ತಲುಪಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next