ಹೈದರಾಬಾದ್ : ಭಾರತೀಯ ವಾಯು ಪಡೆಯ ಕಿರಣ್ ತರಬೇತಿ ವಿಮಾನವೊಂದು ಇಂದು ಶುಕ್ರವಾರ ತೆಲಂಗಾಣದ ಸಿದ್ದಿಪೆಟ್‌ನಲ್ಲಿ ಪತನಗೊಂಡಿತು.ಆದರೆ ಯಾವುದೇ ಜೀವ ಹಾನಿ ಆಗಿಲ್ಲ ಎಂದು ವರದಿಗಳು ತಿಳಿಸಿವೆ.
ಹಕೀಂಪೆಟ್ ವಾಯುಪಡೆ ಕೇಂದ್ರದಿಂದ ಟೇಕಾಫ್ ಆಗಿದ್ದ ಈ ತರಬೇತಿ ವಿಮಾನ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಹಕೀಮ್‌ಪೆಟ್‌ನಿಂದ ಸುಮಾರು 50 ಕಿ.ಮೀ. ದೂರದಲ್ಲಿ ಪತನಗೊಂಡಿತೆಂದು ವರದಿಯಾಗಿದೆ.
ಕಿರಣ್ ತರಬೇತಿ ವಿಮಾನದ ಪತನಕ್ಕೆ ಕಾರಣವೇನೆಂಬುದನ್ನು ಪತ್ತೆ ಹಚ್ಚಲು ಕೋರ್ಟ್ ತನಿಖೆಯನ್ನು ಆದೇಶಿಸಲಾಗಿದೆ.
ಕಳೆದ ಸೆ.28ರಂದು ಐಎಎಫ್ ಕಿರಣ್ ವಿಮಾನವು ತನ್ನ ದೈನಂದಿನ ತರಬೇತಿ ಹಾರಾಟದಲ್ಲಿದ್ದಾಗ ಪತನಗೊಂಡಿತ್ತು. ಅದು ಹೈದರಾಬಾದ್ ಹಕೀಂಪೆಟ್ ವಾಯು ಪಡೆ ಕೇಂದ್ರದಿಂದ ನಿತ್ಯದ ತರಬೇತಿ ಹಾರಾಟದಲ್ಲಿತ್ತು. ಅಂಕಿರೆಡ್ಡಿಪಳ್ಳಿ ಸಮೀಪ ಅದು ಪತನಗೊಂಡಿತ್ತು. ಅದರ ಪೈಲಟ್ ಸಕಾಲದಲ್ಲಿ ಹೊರ ಜಿಗಿದು ಸುರಕ್ಷಿತವಾಗಿ ಪಾರಾಗಿದ್ದರು.
ಕಿರಣ್ ತರಬೇತಿ ವಿಮಾನಗಳ ಪತನಕ್ಕೆ ಕಾರಣವೇನೆಂಬುದನ್ನು ವಾಯು ಪಡೆ ಇನ್ನಷ್ಟೇ ಪತ್ತೆ ಹಚ್ಚಬೇಕಿದೆ.