Advertisement

2019 ಸೆಪ್ಟಂಬರ್‌ನಲ್ಲಿ ವಾಯುಪಡೆಗೆ ಮೊದಲ ರಾಫೇಲ್‌ ಫೈಟರ್‌ ಜೆಟ್‌

05:28 PM Jul 24, 2018 | udayavani editorial |

ಹೊಸದಿಲ್ಲಿ : ಭಾರತೀಯ ವಾಯು ಪಡೆ 2019ರ ಸೆಪ್ಟಂಬರ್‌ನಲ್ಲಿ  ಹಾರಾಟ ಸಿದ್ಧ ಸ್ಥಿತಿಯಲ್ಲಿರುವ ಮೊದಲ ರಾಫೇಲ್‌ ಫೈಟರ್‌ ಜೆಟ್‌ ವಿಮಾನವನ್ನು ಪಡೆಯಲಿದೆ. 2022ರ ಎಪ್ರಿಲ್‌ ಒಳಗಾಗಿ ವಾಯು ಪಡೆಯು ಎಲ್ಲ 36 ರಾಫೇಲ್‌ ಯುದ್ಧ ವಿಮಾನಗಳನ್ನು ಪಡೆಯಲಿದೆ.

Advertisement

ರಕ್ಷಣಾ ಸಚಿವೆ ನಿರ್ಮಲಾ ಸೀತಾರಮಣ್‌ ಅವರು ರಾಜ್ಯಸಭೆಗೆ ಈ ವಿಷಯ ತಿಳಿಸಿದರು. ರಾಫೇಲ್‌ ಯುದ್ಧ ವಿಮಾನದ ಜತೆಗೆ ವಾಯು ಪಡೆಯು ಪೂರಕ ಪರಿಕರಗಳು ಮತ್ತು ಶಸ್ತ್ರಾಸ್ತ್ರಗಳನ್ನು ಕೂಡ ಪಡೆಯಲಿದೆ ಎಂದವರು ಹೇಳಿದರು. 

ಭಾರತ 58,000 ಕೋಟಿ ರೂ. ವೆಚ್ಚದಲ್ಲಿ 36 ರಾಫೇಲ್‌ ಫೈಟರ್‌ ಜೆಟ್‌ಗಳನ್ನು ಫ್ರಾನ್ಸ್‌ ನಿಂದ ಪಡೆಯುವ ಸಲುವಾಗಿ 2016ರಲ್ಲಿ ಒಪ್ಪಂದಕ್ಕೆ ಸಹಿ ಮಾಡಿದೆ. ಎರಡು ಸರಕಾರಗಳ ನಡುವಿನ ಈ ನೇರ ವಹಿವಾಟು ಪ್ರಧಾನಿ ಮೋದಿ ಅವರು ಪ್ಯಾರಿಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಂತಿಮ ಗೊಂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next