Advertisement

ತನ್ನದೇ ಹೆಲಿಕಾಪ್ಟರ್‌ ಹೊಡೆದುರುಳಿಸಿದ ಪ್ರಕರಣ!; ಐಎಎಫ್ ಅಧಿಕಾರಿಗಳ ವಿರುದ್ಧ ದೋಷಾರೋಪ

09:56 AM Aug 24, 2019 | Team Udayavani |

ಹೊಸದಿಲ್ಲಿ: ಬಾಲಾಕೋಟ್‌ ದಾಳಿಯ ಬಳಿಕ ಫೆ.27ರಂದು ಪಾಕಿಸ್ಥಾನ ವಿರುದ್ಧ ವಾಯುಪಡೆ ಸಮರ ಕ್ಷಣದಲ್ಲಿರುವಾಗಲೇ ವಾಯುಪಡೆಗೆ ಸೇರಿದ ಮಿ-17 ಹೆಲಿಕಾಪ್ಟರನ್ನು ಕ್ಷಿಪಣಿ ಬಳಸಿ ತಾವೇ ಹೊಡೆದುರುಳಿಸಿದ ಪ್ರಕರಣಕ್ಕೀಗ ಜೀವಬಂದಿದೆ.

Advertisement

ಪ್ರಕರಣದಲ್ಲಿ ಐವರು ವಾಯುಪಡೆ ಅಧಿಕಾರಿಗಳನ್ನು ತಪ್ಪಿತಸ್ಥರು ಎಂದು ಹೇಳಲಾಗಿದೆ. ತನಿಖೆಯಲ್ಲಿ ಈ ವಿಚಾರ ಗೊತ್ತಾಗಿದ್ದು, ತನಿಖೆಯ ಕುರಿತ ವಿವರಗಳನ್ನು ವಾಯುಪಡೆ ಮುಖ್ಯ ಕಚೇರಿಗೆ ಕಳಿಸಲಾಗಿದೆ ಎಂದು ವಾಯುಪಡೆ ಮೂಲಗಳು ಹೇಳಿವೆ.

ಹೈ ಅಲರ್ಟ್‌ ಇರುವ ವೇಳೆ ಇಸ್ರೇಲ್‌ ನಿರ್ಮಿತ ಕ್ಷಿಪಣಿ ದಾಳಿಗೆ ಅನುಮತಿ ನೀಡಿದ್ದರಿಂದ ಅದು ವಾಯುಪಡೆಯ ಹೆಲಿಕಾಪ್ಟರನ್ನು ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ನಲ್ಲಿ ಹೊಡೆದುರುಳಿಸಿತ್ತು. ಇದರಿಂದ ವಾಯುಪಡೆಯ 6 ಮಂದಿ ಅಧಿಕಾರಿಗಳು ಮೃತಪಟ್ಟಿದ್ದರು. ವೆಸ್ಟರ್ನ್ ಏರ್‌ ಕಮಾಂಡ್‌ಗೆ ಸೇರಿದ್ದ ಹೆಲಿಕಾಪ್ಟರ್‌ ಇದಾಗಿದ್ದು, ಹಾರಾಟ ಆರಂಭಿಸಿದ 10 ನಿಮಿಷದಲ್ಲಿ ಕ್ಷಿಪಣಿ ದಾಳಿಗೆ ಒಳಗಾಗಿತ್ತು. ತನ್ನದೇ ಹೆಲಿಕಾಪ್ಟರ್‌ ಹೊಡೆದುರುಳಿಸಿ, ಜೀವಹಾನಿಯಾಗಿದ್ದರಿಂದ ವಾಯುಪಡೆ ತಲೆತಗ್ಗಿಸುವಂತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next