Advertisement
ಎರಡು ಎಂಜಿನ್ ಹಾಗೂ ರೋಟರ್ ಹೊಂದಿ ರುವ ಈ ಕಾಪ್ಟರ್‌ಗಳು ಅಡ್ಡಲಾಗಿರುವ ಪ್ಲಾಟ್‌ಫಾರಂನಿಂದಲೂ ಹಾರಬಲ್ಲವು. ಹೀಗಾಗಿ ಇದನ್ನು ಸೇನೆ ಸಿಬಂದಿ, ಶಸ್ತ್ರಾಸ್ತ್ರ ಮತ್ತು ಇಂಧನ ಸಾಗಣೆಗೆ ಬಳಸಬಹುದಾಗಿದೆ. ಅಷ್ಟೇ ಅಲ್ಲ, ರಾತ್ರಿಯಲ್ಲೂ ಈ ಚಿನೂಕ್ ಕಾಪ್ಟರ್‌ಗಳ ಮೂಲಕ ಸೇನಾ ಕಾರ್ಯಾಚರಣೆ ನಡೆಸಬಹುದಾಗಿದೆ. ನಮ್ಮಲ್ಲಿ ವಿವಿಧ ರೀತಿಯ ಭೂಭಾಗಗಳಿವೆ. ಹೀಗಾಗಿ ನಮಗೆ ಅಡ್ಡಲಾಗಿರುವ ಪ್ಲಾಟ್‌ಫಾರಂನಿಂದಲೂ ಹಾರಾಟ ನಡೆಸಬಹುದಾದ ಕಾಪ್ಟರ್‌ಗಳ ಅಗತ್ಯವಿತ್ತು. ಈ ಕಾಪ್ಟರ್‌ನಿಂದಾಗಿ ಸೇನೆಗೆ ಅತ್ಯಂತ ಸಂಕಷ್ಟದ ಸಮಯದಲ್ಲೂ ಸಿಬಂದಿ ಹಾಗೂ ಶಸ್ತ್ರಾಸ್ತ್ರಗಳನ್ನು ಸಾಗಿಸಲು ಮತ್ತು ತುರ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯವಾಗಲಿದೆ.
Advertisement
ಸೇನೆಗೆ ಚಿನೂಕ್ ಬಲ
09:34 AM Mar 29, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.