Advertisement

13 ಮಂದಿ ಪ್ರಯಾಣಿಕರಿದ್ದ ಐಎಎಫ್ ವಿಮಾನ ನಾಪತ್ತೆ

01:50 AM Jun 04, 2019 | Sriram |

ಇಟಾನಗರ/ನವದೆಹಲಿ: ಭಾರತೀಯ ವಾಯುಪಡೆಗೆ ಸೇರಿದ್ದ ರಷ್ಯಾ ನಿರ್ಮಿತ ‘ಸಿ-130 ಜೆ’ ಮಾದರಿಯ ವಿಮಾನವೊಂದು ಸೋಮವಾರ ಪ್ರಯಾಣದ ಮಧ್ಯೆಯೇ ನಾಪತ್ತೆಯಾಗಿದ್ದು, ಅದರಲ್ಲಿದ್ದ 8 ಸಿಬ್ಬಂದಿ ಹಾಗೂ 5 ಪ್ರಯಾಣಿಕರ ಬಗ್ಗೆ ಆತಂಕ ಸೃಷ್ಟಿಯಾಗಿದೆ.

Advertisement

ಸೋಮವಾರ ರಾತ್ರಿಯ ವೇಳೆಗೆ ಬಂದ ವರದಿಗಳ ಪ್ರಕಾರ, ಕಣ್ಮರೆಯಾದ ವಿಮಾನಕ್ಕಾಗಿ ಹುಡುಕಾಟ ಮುಂದುವರಿದಿದ್ದು, ಭಾರತದ ಭೂ ಸೇನೆಯ ನೆರವನ್ನೂ ಪಡೆಯಲಾಗಿದೆ. ಈ ಹುಡುಕಾಟಕ್ಕಾಗಿ ವಾಯುಪಡೆ, ತನ್ನಲ್ಲಿದ್ದ ‘ಎಎನ್‌-32’, ‘ಎಂಐ-17’ ಹಾಗೂ ‘ಆ್ಯಂಟೋವ್‌ ಎಎನ್‌-32’ ವಿಮಾನಗಳನ್ನು ನಿಯೋಜಿಸಿದೆ.

ಸೋಮವಾರ ಮಧ್ಯಾಹ್ನ 12:27ರ ಸುಮಾರಿಗೆ ಅಸ್ಸಾಂನ ಜೋರ್ಹತ್‌ ಸೇನಾ ನೆಲೆಯಿಂದ ಅರುಣಾಚಲ ಪ್ರದೇಶದ ಶಿ-ಯೋಮಿ ಜಿಲ್ಲೆಯಲ್ಲಿನ ಮೆಂಚುಕಾ ನಿಲ್ದಾಣದ ಕಡೆಗೆ ವಿಮಾನ ಪ್ರಯಾಣ ಬೆಳೆಸಿತ್ತು. ಟೇಕ್‌ ಆಫ್ ಆದ 35 ನಿಮಿಷಗಳಲ್ಲಿ ಅಂದರೆ 1 ಗಂಟೆಗೆ ವಿಮಾನವು ನಿಯಂತ್ರಣ ಕೇಂದ್ರದಿಂದ ಸಂಪರ್ಕ ಕಡಿದು ಕೊಂಡಿತು. ವಿಮಾನ ಪತನಗೊಂಡಿರುವ ಬಗ್ಗೆ ಅನುಮಾನಗಳು ಎದ್ದಿದ್ದ ರಿಂದ ಅದು ಪ್ರಯಾಣಿಸಿದ್ದ ಮಾರ್ಗದಲ್ಲಿ ಶೋಧ ನಡೆದಿದೆ.

ಐಎಎಫ್ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದೇನೆ.
-ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next