Advertisement
ಬೆಳಗಾವಿಯ ಗಣೇಶಪುರದ ಹನುಮಂತರಾವ್ ಸಾರಥಿ (34) ಹುತಾತ್ಮರಾದ ವಿಂಗ್ ಕಮಾಂಡರ್. ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಶನಿವಾರ ಬೆಳಗ್ಗೆ 5.30ರ ವೇಳೆಗೆ ಎರಡೂ ವಿಮಾನಗಳು ದೈನಂದಿನ ತರಬೇತಿ ಹಾರಾಟಕ್ಕೆಂದು ಗ್ವಾಲಿಯರ್‌ನ ವಾಯುನೆಲೆಯಿಂದ ಟೇಕ್‌ಆಫ್ ಆಗಿದ್ದವು. ವಿಂಗ್ ಕಮಾಂಡರ್ ಹನುಮಂತ ರಾವ್ ಅವರು ಮಿರಾಜ್ 2000 ವಿಮಾನವನ್ನು ಮುನ್ನಡೆಸುತ್ತಿದ್ದರೆ ಸುಖೋಯ್‌ನಲ್ಲಿ ಇಬ್ಬರು ಪೈಲಟ್‌ಗಳಿದ್ದರು. ಏಕಾಏಕಿ ಎರಡೂ ವಿಮಾನಗಳು ಪತನಗೊಂಡಿದ್ದು, ಸುಖೋಯ್‌ನಲ್ಲಿದ್ದ ಇಬ್ಬರು ಸುರಕ್ಷಿತವಾಗಿ ಹೊರಗೆ ಹಾರಿದ ಕಾರಣ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ.
Related Articles
Advertisement
ರಷ್ಯಾ ನಿರ್ಮಿತ ಸುಖೋಯ್-30ಎಂಕೆಐ ಜೆಟ್ ಮತ್ತು ಫ್ರಾನ್ಸ್ ನಿರ್ಮಿತ ಮಿರಾಜ್-2000 ಯುದ್ಧ ವಿಮಾನಗಳು ಹಾರಾಟದ ವೇಳೆ ಪರಸ್ಪರ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿರಬಹುದು ಎಂದು ರಕ್ಷಣ ತಜ್ಞರು ಅಂದಾಜಿಸಿದ್ದಾರೆ. ಘಟನೆಗೆ ಕಾರಣವೇನು ಎಂಬ ಕುರಿತು ವಾಯುಪಡೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ. ವಾಯುಪಡೆಯು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ. ವಿಂಗ್ ಕಮಾಂಡರ್ ಹನುಮಂತ ರಾವ್ ಅವರ ಸಾವಿಗೆ ರಕ್ಷಣ ಸಚಿವ ರಾಜನಾಥ್ ಸಿಂಗ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.
ಇಂದು ಹುಟ್ಟೂರಿಗೆ ಪಾರ್ಥಿವ ಶರೀರವಿಂಗ್ ಕಮಾಂಡರ್ ಹನುಮಂತರಾವ್ ಗ್ವಾಲಿಯರ್‌ನಲ್ಲೇ ನೆಲೆಸಿದ್ದರು. ಅವರ ಪಾರ್ಥಿವ ಶರೀರ ರವಿವಾರ ವಿಶೇಷ ವಿಮಾನದಲ್ಲಿ ಗಣೇಶಪುರಕ್ಕೆ ಬರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.