Advertisement

Air Store: ಆಕಸ್ಮಿಕವಾಗಿ ಪೋಖ್ರಾನ್ ಬಳಿ ಏರ್‌ಸ್ಟೋರ್‌ ಬೀಳಿಸಿದ ಫ್ಲೈಟ್‌

08:15 AM Aug 22, 2024 | Team Udayavani |

ಹೊಸದಿಲ್ಲಿ: ಭಾರತೀಯ ವಾಯುಪಡೆಯ ಯುದ್ಧ­ವಿಮಾನವೊಂದು ಆಕಸ್ಮಿಕವಾಗಿ ರಾಜಸ್ಥಾನ ಪೋಖ್ರಾನ್ ಬಳಿ “ಏರ್‌ ಸ್ಟೋರ್‌’ (ಯುದ್ಧದಲ್ಲಿ ಬಳಕೆಯಾಗುವ ಆಯುಧಗಳು) ಬೀಳಿಸಿದೆ. ತಾಂತ್ರಿಕವಾಗಿ ಸಂಭವಿಸಿದ ಸಮಸ್ಯೆಯಿಂದ ಹೀಗಾಗಿದೆ ಎಂದು ವಾಯುಪಡೆ ಹೇಳಿದೆ.

Advertisement

ಪೋಖ್ರಾನ್ ಮೇಲೆ ಹಾದುಹೋಗುತ್ತಿದ್ದ ವಿಮಾನವೊಂದು ಏರ್‌ಸ್ಟೋರ್‌ ಬೀಳಿಸಿದೆ. ಆದರೆ ಯಾವುದೇ ಅಪಾಯ ಸಂಭವಿಸಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ವಾಯುಪಡೆ ಹೇಳಿದೆ. ಭೀಕರವಾದ ಶಬ್ದ ಕೇಳಿಬಂದಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪುಡಿಯಾದ ಕೆಲವು ವಸ್ತುಗಳು ಬಿದ್ದಿರುವುದು ತಿಳಿದುಬಂದಿದೆ.

ಇದನ್ನೂ ಓದಿ: Hezbollah: ಇಸ್ರೇಲ್‌ ವಿರುದ್ಧ ಹೆಜ್ಬುಲ್ಲಾ 50ಕ್ಕೂ ಅಧಿಕ ರಾಕೆಟ್‌ ದಾಳಿ

Advertisement

Udayavani is now on Telegram. Click here to join our channel and stay updated with the latest news.

Next