ಭೋಪಾಲ್ : ಮಧ್ಯಪ್ರದೇಶದ ಭಿಂದ್ ಬಳಿ ಭಾರತೀಯ ವಾಯುಪಡೆಯ ವಿಮಾನವೊಂದು ತರಬೇತಿ ವೇಳೆ ಪತನಗೊಂಡ ಅವಘಡ ಗುರುವಾರ ಬೆಳಗ್ಗೆ ನಡೆದಿದ್ದು, ಅದ್ರಷ್ಟವಷಾತ್ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಐಎಎಫ್ ಮಿರಾಜ್ 2000 ವಿಮಾನ ಕೇಂದ್ರ ವಲಯದಲ್ಲಿ ತರಬೇತಿ ನೀಡುವಾಗ ತಾಂತ್ರಿಕ ದೋಷವನ್ನು ಅನುಭವಿಸಿ ಪತನಗೊಂಡಿದೆ ಎಂದು ಹೇಳಲಾಗಿದೆ.
ವಿಮಾನ ಪತನಕ್ಕೆ ಕಾರಣಗಳೇನು ಎನ್ನುವದರ ಕುರಿತು ತನಿಖೆ ನಡೆಸಲು ವಾಯುಪಡೆ ಆದೇಶಿಸಿದೆ.
ಪೈಲಟ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಮಾನದ ಅವಶೇಷಗಳು ಭಿಂದ್ ನಿಂದ ಆರು ಕಿ.ಮೀ ದೂರದಲ್ಲಿನ ಹೊಲದಲ್ಲಿ ಬಿದ್ದಿದ್ದು, ನೂರಾರು ಸಂಖ್ಯೆಯ ಕುತೂಹಲಿಗಳು ಆಗಮಿಸುತ್ತಿದ್ದಾರೆ. ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿ ಸ್ಥಳಕ್ಕೆ ಯಾರೂ ತೆರಳದಂತೆ ತಡೆ ಹಿಡಿದಿದ್ದಾರೆ.