ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಳ್ಳುತ್ತಲೇ ತಾಲಿಬಾನ್ ಉಗ್ರ ಸಂಘಟನೆ ಅಫ್ಘಾನಿಸ್ತಾನದಲ್ಲಿನ ಯುದ್ಧ ಕೊನೆಗೊಂಡಿದೆ ಎಂದು ಘೋಷಿಸಿದೆ. ಮತ್ತೊಂದೆಡೆ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಸೇರಿದಂತೆ ಇತರ 120 ಅಧಿಕಾರಿಗಳನ್ನು ಭಾರತೀಯ ವಾಯುಪಡೆ ಮೂಲಕ ಗುಜರಾತ್ ನ ಜಾಮ್ ನಗರಕ್ಕೆ ಮಂಗಳವಾರ (ಆಗಸ್ಟ್ 17) ಬಂದಿಳಿದಿದ್ದಾರೆ.
ಇದನ್ನೂ ಓದಿ:ಮಂಗಳೂರು: ಚಲಿಸುತ್ತಿದ್ದ ಬಸ್ ಮೇಲೆ ಬಿದ್ದ ಬೃಹತ್ ತೆಂಗಿನ ಮರ!
ಅಫ್ಘಾನಿಸ್ತಾನದಲ್ಲಿನ ಅರಾಜಕತೆ ಸ್ಥಿತಿಯ ಹಿನ್ನೆಲೆಯಲ್ಲಿ ಕಾಬೂಲ್ ನಲ್ಲಿರುವ ನಮ್ಮ ರಾಯಭಾರಿ ಹಾಗೂ ರಾಯಭಾರ ಕಚೇರಿಯ ಸಿಬಂದಿಗಳನ್ನು ಕೂಡಲೇ ಭಾರತಕ್ಕೆ ವಾಯುಪಡೆ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾ ಅರಿಂದಾಮ್ ಬಾಗ್ಚಿ ತಿಳಿಸಿದ್ದರು.
ಇಂದು ಬೆಳಗ್ಗೆ ಭಾರತೀಯ ವಾಯುಪಡೆಯ ಸಿ17 ವಿಮಾನದಲ್ಲಿ ಕಾಬೂಲ್ ನಲ್ಲಿದ್ದ ರಾಯಭಾರಿ ಹಾಗೂ ಇತರೆ 120ಕ್ಕೂ ಅಧಿಕ ಭಾರತೀಯ ಅಧಿಕಾರಿಗಳನ್ನು ಗುಜರಾತ್ ಗೆ ಕರೆ ತರಲಾಗಿದ್ದು, ಇನ್ನುಳಿದವರನ್ನು ಮಂಗಳವಾರ ಕರೆತರಲಾಗುವುದು ಎಂದು ವರದಿ ವಿವರಿಸಿದೆ.
ಅಫ್ಘಾನಿಸ್ತಾನ ಉಗ್ರರ ಕೈವಶವಾಗುತ್ತಲೇ ಅಮೆರಿಕದಲ್ಲಿ ಬೈಡೆನ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರಗಳು ಶುರುವಾಗಿದೆ. ಯುದ್ಧಗ್ರಸ್ತ ರಾಷ್ಟ್ರದಿಂದ ಸೇನೆಯನ್ನು ವಾಪಸ್ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ದೇಶದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿದೆ.