Advertisement

ಐಎಎಫ್ 2 ಯೋಜನೆ ಅಂತಿಮ

12:58 AM Jul 09, 2019 | Sriram |

ಹೊಸದಿಲ್ಲಿ: “ಮೇಕ್‌ ಇನ್‌ ಇಂಡಿಯಾ’ ದಡಿ ವಾಯುಪಡೆಗಾಗಿ (ಐಎಎಫ್) ಅನುಷ್ಠಾನಗೊಳ್ಳಬೇಕಿರುವ 1.50 ಲಕ್ಷ ಕೋಟಿ ರೂ.ಮೌಲ್ಯದ ಎರಡು ಮಹತ್ವದ ಯೋಜನೆಗಳಿಗೆ ಐಎಎಫ್ ಈಗ ಅಂತಿಮ ಸ್ಪರ್ಶ ನೀಡಲಾರಂಭಿಸಿದೆ.

Advertisement

ಇದರಲ್ಲೊಂದು, ಜಗತ್ತಿನಲ್ಲೇ ಅತಿ ದೊಡ್ಡ ರಕ್ಷಣಾ ಖರೀದಿ ಎಂದೆನಿಸಿರುವ 114 ಯುದ್ಧ ವಿಮಾನಗಳ ತಯಾರಿಕೆ. ಮತ್ತೂಂದು, ಟಾಟಾ-ಏರ್‌ ಬಸ್‌ ಕಂಪೆನಿಗಳ ಸಹಯೋಗದಲ್ಲಿ ಸಿದ್ಧಗೊಳ್ಳಲಿರುವ ಸಿ-295 ಮಾದರಿಯ ಮಧ್ಯಮ ಗಾತ್ರದ ಸರಕು ಸಾಗಣೆಯ 56 ವಿಮಾನಗಳ ತಯಾರಿಕೆ.

ಇವುಗಳಲ್ಲಿ, ಟಾಟಾ-ಏರ್‌ ಬಸ್‌ ಸಹ ಯೋ ಗದಲ್ಲಿ ಅಂದಾಜು 11,930 ಕೋಟಿ ರೂ. ವೆಚ್ಚದಲ್ಲಿ ಒಟ್ಟು 56 “ಸಿ-295′ ಮಾದರಿ ವಿಮಾನಗಳ ತಯಾರಿಕೆ ಈ ವರ್ಷದಲ್ಲೇ ಶುರುವಾಗಲಿದೆ ಎಂದು “ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ. ಇವು, 1960ರಿಂದ ಐಎಎಫ್ನಲ್ಲಿ ಬಳಕೆಯಲ್ಲಿರುವ ಅವ್ರೊ ಸರಕು ಸಾಗಣೆ ವಿಮಾನಗಳಿಗೆ ವಿಶ್ರಾಂತಿ ನೀಡಲಿವೆ.

ಆದರೆ, 114 ಯುದ್ಧ ವಿಮಾನಗಳ ತಯಾರಿಕೆ ಹಾಗೂ ಐಎಎಫ್ಗೆ ಅವುಗಳ ಸೇರ್ಪಡೆಗೆ ಕನಿಷ್ಠ 5 ವರ್ಷವಾದರೂ ಬೇಕು ಎಂದು ಹೇಳಲಾಗಿದೆ. ಈ ವಿಮಾನಗಳ ತಯಾರಿಕೆಗೆ ಇತ್ತೀಚೆಗೆ ಬಿಡ್‌ಗಳನ್ನು ಆಹ್ವಾನಿಸಲಾಗಿದ್ದು, ಸದ್ಯಕ್ಕೆ ಅವುಗಳ ಪರಾಮರ್ಶೆ ನಡೆದಿದೆ. ಪರಾಮರ್ಶನಾ ವರದಿಯು ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಕೈ ಸೇರಲಿದ್ದು, ಆನಂತರ ಅದು “ಭದ್ರತೆಗಾಗಿನ ಸಂಪುಟ ಸಮಿತಿ’ಗೆ ರವಾನೆಯಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next