Advertisement

ಖಾಸಗಿ ಬಂಡವಾಳಕ್ಕೆ I2U2 ಸಿದ್ಧ

12:30 AM Sep 23, 2023 | Team Udayavani |

ನ್ಯೂಯಾರ್ಕ್‌: ಭಾರತ, ಇಸ್ರೇಲ್‌, ಅಮೆರಿಕ ಮತ್ತು ಯುಎಇಗಳನ್ನು ಒಳಗೊಂಡ ರಾಷ್ಟ್ರಗಳ ಒಕ್ಕೂಟ (ಐ2ಯು2) ವ್ಯಾಪಾರ, ವಾಣಿಜ್ಯ ಕ್ಷೇತ್ರಗಳಲ್ಲಿ ಹೊಸ ಮೈತ್ರಿಕೂಟ ಘೋಷಣೆ ಮಾಡಿಕೊಂಡಿವೆ. ಅದರಲ್ಲಿ ಖಾಸಗಿ ಕ್ಷೇತ್ರದಿಂದ ಬಂಡವಾಳ ಹೂಡಿಕೆಯನ್ನು ಆಹ್ವಾನಿಸಿವೆ.

Advertisement

ವಿಶ್ವಸಂಸ್ಥೆಯಲ್ಲಿ ಸದ್ಯ ನಡೆಯುತ್ತಿರುವ ಸಾಮಾನ್ಯ ಸಭೆಯ ಸಂದರ್ಭದಲ್ಲಿಯೇ ನಾಲ್ಕೂ ರಾಷ್ಟ್ರಗಳ ಪ್ರತಿನಿಧಿಗಳು ಸಭೆ ಸೇರಿ ಒಕ್ಕೂಟದ ಹೊಸ ವೆಬ್‌ಸೈಟ್‌ ಅನಾವರಣಗೊಳಿಸಿವೆ. ಜತೆಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರ ವೃದ್ಧಿಸುವ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡಿವೆ. ಭಾರತದ ಪರವಾಗಿ ವಿದೇಶಾಂಗ ಸಚಿವಾಲಯದಲ್ಲಿನ ಆರ್ಥಿಕ ವಿಭಾಗದ ಕಾರ್ಯದರ್ಶಿ ದಮ್ಮು ರವಿ ಭಾಗವಹಿಸಿದ್ದರು. ಇಂಧನ, ನೀರು, ಸಾರಿಗೆ, ತಂತ್ರಜ್ಞಾನ, ಆರೋಗ್ಯ, ಆಹಾರ ಭದ್ರತೆ ಕ್ಷೇತ್ರದಲ್ಲಿ ಸಹಕರಿಸಲು ಒಮ್ಮತಾಭಿಪ್ರಾಯಕ್ಕೆ ಬರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next