1978ರಿಂದಲೇ ಸಾರ್ವಜನಿಕ ಜೀವನ ಪ್ರವೇಶ ಆಯಿತಾದರೂ ನಾನು ಮೊದಲ ಬಾರಿ ವಿಧಾನಸಭೆ ಚುನಾವಣೆ ಎದುರಿಸಿದ್ದು 1983 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೆ.
Advertisement
ಸಮಾಜವಾದಿ ನಾಯಕರ ಒತ್ತಾಸೆ ಯಿಂದ ಮೊದಲ ಬಾರಿಗೆ ನಾನು ಚುನಾವಣೆ ಎದುರಿಸಿದ ಅನುಭವ ಅತ್ಯಂತ ವಿಶೇಷವಾದದ್ದು.
Related Articles
Advertisement
ಕಾರ್ಯಕರ್ತರು ಹಾಗೂ ಮುಖಂಡರು ಸ್ವಯಂ ಪ್ರೇರಿತರಾಗಿ ಊಟ-ತಿಂಡಿ ವ್ಯವಸ್ಥೆ ಮಾಡುತ್ತಿದ್ದರು. ಸಭೆ, ಸಮಾರಂಭಗಳಿಗೂ ಹೆಚ್ಚಿನ ಖರ್ಚು ಆಗುತ್ತಿರಲಿಲ್ಲ. ಹೀಗಾಗಿಯೇ ಮೊದಲ ಚುನಾವಣೆಯಲ್ಲಿ ನನ್ನ ವೆಚ್ಚ 63 ಸಾವಿರ ರೂಪಾಯಿ ಮಾತ್ರ. ಅನಂತರ 1985 ರಲ್ಲಿ ಎರಡನೇ ಬಾರಿ ಜನತಾಪಕ್ಷದಿಂದ ಸ್ಪರ್ಧೆ ಮಾಡಿದಾಗಲೂ ಹೆಚ್ಚಿನ ಮೊತ್ತ ಖರ್ಚಾಗಲಿಲ್ಲ.
ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇ ಕಾಗಿದೆ. ಕೋಟ್ಯಂತರ ರೂ. ವೆಚ್ಚ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಗೂ ಅಪಾಯಕಾರಿ. ಎಲ್ಲರೂ ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾಧನೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಮತದಾರರ ಮುಂದೆ ಹೋಗಬೇಕು. ಮತ ದಾರರು ಇದರ ಮಾನದಂಡದಲ್ಲಿ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಬೇಕು. ಆಗ ಪ್ರಜಾ ಪ್ರಭುತ್ವ ವ್ಯವಸ್ಥೆಗೆ ಅರ್ಥ ಬರಲು ಸಾಧ್ಯ.
-ಎಸ್.ಲಕ್ಷ್ಮೀನಾರಾಯಣ