ನವದೆಹಲಿ: ಬಾಲಕೋಟ್ ಗೆ ನುಗ್ಗಿ ಭಾರತೀಯ ವಾಯುಸೇನೆ ಜೈಶ್ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿದ ನಂತರ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಯುದ್ಧ ವಿಮಾನ ಹೊಡೆದುರುಳಿಸಿದ್ದನ್ನು ಕಂಡಿರುವುದಾಗಿ ಐಎಎಫ್ ಸ್ಕ್ವಾರ್ಡನ್ ಲೀಡರ್ ಮಿಂಟಿ ಅಗರ್ವಾಲ್ ತಿಳಿಸಿದ್ದಾರೆ.
ಮಿಂಟಿ ಅಗರ್ವಾಲ್ ಭಾರತೀಯ ವಾಯುಸೇನೆ ಪಡೆಯ ಮೊದಲ ಮಹಿಳೆಯಾಗಿದ್ದಾರೆ. ಯೋಧ ಸೇವಾ ಪದಕ ಪಡೆದ ಮೊದಲ ಐಎಎಫ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ಕ್ವಾರ್ಡನ್ ಲೀಡರ್ ಮಿಂಟಿ ಅಗರ್ವಾಲ್ ಫೆಬ್ರುವರಿ 27ರಂದು ನಡೆದ ಡಾಗ್ ಫೈಟ್ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ಗಡಿ ನಿಯಂತ್ರಣ ರೇಖೆ ದಾಟಿ ಬಂದ ಪಾಕ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲು ಅಭಿನಂದನ್ ಅವರಿಗೆ ಮಿಂಟಿ ಮಾರ್ಗದರ್ಶನ ನೀಡಿ ಸಹಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮಿಂಟಿ ಅಗರ್ವಾಲ್ ಅವರಿಗೆ ಭಾರತ ಸರಕಾರ ಯುಧ್ ಸೇವಾ ಪದಕ ನೀಡಿ ಗೌರವಿಸಿತ್ತು.
ಅಭಿನಂದನ್ ಅವರು ವಿಮಾನ ಹಾರಾಟ ನಡೆಸುತ್ತಿದ್ದಾಗ ಅವರು ನನ್ನ ಜತೆ ಸಂಪರ್ಕದಲ್ಲಿದ್ದರು. ಅಭಿನಂದನ್ ಅವರಿಗೆ ನಾನು ಮಾರ್ಗದರ್ಶನ ನೀಡುತ್ತಿದ್ದೆ. ಈ ವೇಳೆ ಪಾಕ್ ಸೇನೆಯ ಎಫ್ 16 ಗಡಿ ದಾಟಿ ಅಭಿನಂದನ್ ಎಫ್ 16 ಯುದ್ಧ ವಿಮಾನ ಹೊಡೆದುರುಳಿಸಿದ್ದು ನನ್ನ ಸ್ಕ್ರೀನ್ ನಲ್ಲಿ ಬಂದಿತ್ತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಬಾಲಾಕೋಟ್ ದಾಳಿ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ನೆಲೆಸಿತ್ತು. ಮರುದಿನ ವಿಂಗ್ ಕಮಾಂಡರ್ ಅಭಿನಂದನ್ ಅವರ ಎಫ್ 16 ಯುದ್ಧ ವಿಮಾನ ಹೊಡೆದುರುಳಿಸಿದ್ದನ್ನು ನಾನು ನನ್ನ ಸ್ಕ್ರೀನ್ ನಲ್ಲಿ ಕಂಡಿರುವುದಾಗಿ ಮಿಂಟಿ ಎಎನ್ ಐ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಈ ರೀತಿ ಯುದ್ಧ ವಿಮಾನ ಹೊಡೆದುರುಳಿಸುವುದು ಅಪರಾಧ ಎಂಬುದಾಗಿಯೂ ಮಿಂಟಿ ಹೇಳಿದರು.