ಚಿತ್ರದುರ್ಗ: ಐತಿಹಾಸಿಕ ಮುರುಘಾ ಮಠದ ತ್ರಿವಿಧ ದಾಸೋಹಿಗಳಾದ ಶ್ರೀ ಶಿವಮೂರ್ತಿ ಮುರುಘಾ ಶರಣರು ಮಠದ ಕರ್ತೃ ಗದ್ದುಗೆ ಪೂಜೆ, ದಾಸೋಹ ಶ್ರೀಮಠದ ಕೆಲಸ ಕಾರ್ಯ ನೋಡಲು ಆದೇಶ ನೀಡಿದ್ದಾರೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ಭಕ್ತಿ ಹಾಗೂ ನಿಷ್ಠೆಯಿಂದ ಗುರು ಬಸವೇಶ್ವರ ಹಾಗೂ ಮುರುಘೇಶನ ಸೇವೆಯನ್ನು ಭಕ್ತರ ಮತ್ತು ಎಲ್ಲಾ ಮಠಾಧೀಶರ ಸಹಕಾರದೊಂದಿಗೆ ಇಂದಿನಿಂದ ನಡೆಸಿಕೊಡುವ ಹೋಗುತ್ತೇನೆ. ಭಕ್ತಾದಿಗಳು ಎಂದಿನಂತೆ ಸಹಕರಿಸಬೇಕು. ತಾತ್ಕಾಲಿಕವಾಗಿ ಅಥವಾ ಮುಂದಿನ ಆದೇಶದವರೆಗೆ ಈ ಜವಾಬ್ದಾರಿ ಇರುತ್ತದೆ ಎಂದು ಶ್ರೀಗಳ ಆದೇಶ ಇದೆ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ಹೈಕೋರ್ಟ್ ಆದೇಶದಂತೆ ಸದ್ಯದ ಪರಿಸ್ಥಿತಿಯಲ್ಲಿ ಶ್ರೀ ಮಠದ ಪರಂಪರೆಯಂತೆ ದೈನಂದಿನ ಕೈಂಕರ್ಯಗಳನ್ನು ತಮ್ಮ ಅನುಪಸ್ಥಿತಿಯಲ್ಲಿ, ಭಕ್ತರ ಆಶಯದಂತೆ ಮುಂದುವರೆಸಿಕೊಂಡು ಹೋಗಲು ಅ.15ರಂದು ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳಿಗೆ ಪತ್ರ ನೀಡಿದ್ದಾರೆ.
ಇದನ್ನೂ ಓದಿ:ಸರ್ಕಸ್ ಕಂಪನಿಯಂತಿದ್ದ ‘ಕೈ’ ಸಭೆಯಲ್ಲಿ ಸಿದ್ದು ಜೋಕರ್; ಸಚಿವ ರಾಮುಲು ತಿರುಗೇಟು
ಶ್ರೀಗಳ ಆದೇಶದಂತೆ ಬಸವಪ್ರಭು ಸ್ವಾಮೀಜಿ ಇಂದಿನಿಂದ ಸೇವಾ ಕಾರ್ಯಗಳನ್ನು ಮಾಡಲು ಕಾರ್ಯೋನ್ಮುಖರಾಗಿರುತ್ತಾರೆ. ಶ್ರೀಮಠದ ಸರ್ವ ಭಕ್ತರು ಎಂದಿನಂತೆ ಸಹಕರಿಸಲು ಶ್ರೀಮಠದ ವತಿಯಿಂದ ಕೋರಿದ್ದಾರೆ.