Advertisement

ಕ್ಷೇತ್ರದ ಪ್ರಗತಿಗೆ ಸೇವೆ ಸಲ್ಲಿಸುತ್ತೇನೆ: ಸುಕುಮಾರ ಶೆಟ್ಟಿ

06:30 AM Jun 08, 2018 | Team Udayavani |

ಬೈಂದೂರು: ಕ್ಷೇತ್ರದ ಪ್ರಗತಿಯ ಮೂಲಕ ಬದಲಾವಣೆ ತರುವ ಕನಸು ನನ್ನಲ್ಲಿದೆ. ಜನರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದ್ದಾರೆ.

Advertisement

ಅವರು ಬೈಂದೂರು ಬಿಜೆಪಿ ಕಛೇರಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ ಬೈಂದೂರು ಗ್ರಾಮೀಣ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಗ್ರಾಮೀಣ ಸಾರಿಗೆಯ ನರ್ಮ್ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದೆ.ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಈ ಕುರಿತು ಕೆ.ಎಸ್‌.ಆರ್‌.ಟಿ.ಸಿ  ಡಿಸಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ.ಇವತ್ತು ಸಮರ್ಪಕ ವ್ಯವಸ್ಥೆ ಕಲ್ಪಿಸದಿದ್ದರೆ ಬೈಂದೂರಿನಲ್ಲಿ ಜನರೊಂದಿಗೆ ಬೀದಿಗಿಳಿದು ಹೋರಾಟ ಮಾಡುತ್ತೇನೆ. ಯಾವುದೇ ರೀತಿಯಲ್ಲೂ ಖಾಸಗಿ ಲಾಬಿಗೆ ಒಳಗಾಗದಂತೆ ಸ್ಪಷ್ಟ ನಿರ್ದೇಶನ ನೀಡುವ ಜತೆಗೆ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು. 

ಚತುಷ್ಪಥ ಕಾಮಗಾರಿ ಅವ್ಯವಸ್ಥೆ ಗಂಭೀರವಾಗಿ ಪರಿಗಣನೆ ಕಳೆದ ಮೂರು ವರ್ಷಗಳಿಂದ ಬೈಂದೂರು ಕ್ಷೇತ್ರದಲ್ಲಿ ಚತುಷ್ಪಥ ಕಾಮಗಾರಿ ನಡೆಸುವ ಐ.ಆರ್‌.ಬಿ ಕಂಪೆನಿಯ ಅಸಮರ್ಪಕ  ಕೆಲಸದಿಂದ ನೂರಾರು ಎಕರೆ ಕೃಷಿ ಭೂಮಿ ಜೇಡಿ ಮಣ್ಣಿನಿಂದ ತುಂಬಿದೆ.ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ಸಾರ್ವಜನಿಕರು ತೀವೃ ತೊಂದರೆ ಅನುಭವಿಸುತ್ತಿದ್ದಾರೆ.ಒತ್ತಿನೆಣೆ ಗುಡ್ಡ ದ ಸ್ಲೋಪ್‌ ಪ್ರೊಟೆಕ್ಷನ್‌ ವಾಲ್‌ ಕುಸಿಯುವ ಭೀತಿಯಿದೆ.ತಲ್ಲೂರು, ಹೆಮ್ಮಾಡಿ, ಜಾಲಾಡಿಗಳಲ್ಲಿ ಜನರಿಗೆ ತೊಂದರೆಯಾಗಿದೆ.ಈ ಕುರಿತು ಮೇಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ.ಮಳೆಗಾಲದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ದೀಪಕ್‌ ಕುಮಾರ್‌ ಶೆಟ್ಟಿ,ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರ,
ಜಿ.ಪಂ ಸದಸ್ಯ ಬಾಬು ಶೆಟ್ಟಿ,ಶಂಕರ ಪೂಜಾರಿ,ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಚಿತ್ತರಂಜನ ಹೆಗ್ಡೆ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next