Advertisement

ಅವರು ಸೂಚಿಸಿದರೆ ಚಿತ್ರರಂಗಕ್ಕೆ ಗುಡ್ ಬೈ ಹೇಳ್ತೀನಿ

08:25 PM May 19, 2021 | Team Udayavani |

ತೆಲಂಗಾಣ : ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ತಮ್ಮ ಮನೋಜ್ಞ ಅಭಿನಯದಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದವರು.  ತಮ್ಮ ಕಲಾತ್ಮಕ ನಟನೆಯಿಂದಲೇ ಚಿತ್ರರಂಗದಲ್ಲಿ ಮೇಲಕ್ಕೆ ಬಂದವರು.

Advertisement

ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿರುವ ಕಾಜಲ್, ಇದೀಗ ಅಭಿನಯದಿಂದ ದೂರವಾಗುವ ಮಾತುಗಳನ್ನಾಡಿದ್ದಾರೆ. ಅರೇ ಬಣ್ಣದ ಪ್ರಪಂಚದಲ್ಲಿ ಉತ್ತುಂಗದಲ್ಲಿರುವ ಮಗಧೀರನ ಚೆಲುವೆ ಕಾಜಲ್, ಅಭಿನಯದಿಂದ ವಿಮುಕ್ತಿ ಪಡೆಯುವ ಮಾತು ಹೇಳಿದ್ದೇಕೆ ?

ಇತ್ತೀಚಿಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಾಜಲ್, ತಾವು ಅಭಿನಯ ನಿಲ್ಲಿಸುವುದು ಯಾವಾಗ ಎಂದು ಹೇಳಿಕೊಂಡಿದ್ದಾರೆ. ತಮ್ಮ ಪತಿ ಹೇಳಿದರೆ ನಾನು ಖಂಡಿತವಾಗಿಯೂ ಮುಖಕ್ಕೆ ಬಣ್ಣ ಹಾಕೋದು ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ನನ್ನ ಪತಿಯಿಂದ ಹಾಗೂ ಕುಟುಂಬದಿಂದ ನನಗೆ ಸಂಪೂರ್ಣ ಬೆಂಬಲ ಸಿಗುತ್ತಿದೆ. ಅವರ ಸಹಕಾರದಿಂದ ನಾನು ಈ ಮಟ್ಟಿಗೆ ಸಾಧನೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಇನ್ನು  ಕಾಜಲ್ ಅಗರವಾಲ್ ಅವರು ಇಂಡಿಯನ್  2 ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕಮಲ್ ಹಾಸನ್ ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next