ಹುಬ್ಬಳ್ಳಿ: ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ ಎಂಬುವುದು ಕೇವಲ ಊಹಾಪೋಹವಷ್ಟೆ. ಕಾಂಗ್ರೆಸ್ ನ ಯಾವ ನಾಯಕನ್ನು ಭೇಟಿಯಾಗಿಲ್ಲ. ನನ್ನ ಮುಂದಿನ ರಾಜಕೀಯದ ನಡೆಯನ್ನು ಜನವರಿ ತಿಂಗಳಲ್ಲಿ ತೆಗದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟಪಡಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆಗೊಂಡು ಲೋಕಸಭೆಗೆ ಸ್ಪರ್ಧೆ ಮಾಡುವುದು ಸುಳ್ಳು. ಪಕ್ಷ ಬಿಡುವುದು ಎಲ್ಲವೂ ಕೇವಲ ಊಹಾಪೋಹವಷ್ಟೇ. ಇಂತಹ ನಿರ್ಧಾರ ಕೈಗೊಳ್ಳಬೇಕಾದರೆ ಕ್ಷೇತ್ರದ ಜನರ, ಬೆಂಬಲಿಗರ, ಹಿತೈಷಿಗಳ ಅಭಿಪ್ರಾಯ ಮುಖ್ಯವಾಗುತ್ತದೆ. ಪಕ್ಷ ಬಿಡುವುದು ಸುಲಭವಲ್ಲ ಎಂದರು.
ಇದನ್ನೂ ಓದಿ:Nidagundi; ಆಯತಪ್ಪಿ ಬಿತ್ತೋ-ಹತ್ಯೆಯತ್ನವೋ?: ರೈಲಿನಿಂದ ಬಿದ್ದ ಮಗುವಿನ ಪೋಷಕರ ಮೇಲೆ ಗುಮಾನಿ
ಕುಟುಂಬದಲ್ಲಿ ಕೆಲವು ಸಮಸ್ಯೆ ಇರುವುದರಿಂದ ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸಲು ಆಗುತ್ತಿಲ್ಲ. ಕೆಲವೊಂದು ವಿಚಾರದ ಬಗ್ಗೆ ನನಗೂ ಭಿನ್ನಾಭಿಪ್ರಾಯವಿದೆ. ಬಿಜೆಪಿಯಲ್ಲಿರುವ ಕೆಲವು ನಾಯಕರು ಪಕ್ಷ ತೊರೆದಿದ್ದಾರೆ. ಕೆಲವೊಂದು ವಿಚಾರಗಳ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನವಿದೆ ಎಂದರು.
ಲೋಕಸಭಾ ಕ್ಷೇತ್ರದ ಎಲ್ಲ ಜವಾಬ್ದಾರಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೇಲೆ ಇದ್ದು, ಅದನ್ನು ಸೂಕ್ತವಾಗಿ ನಿಭಾಯಿಸಬೇಕು. ಅವರು ಕ್ಷೇತ್ರದ ಸಂಸದರಾಗಿದ್ದು, ಪಕ್ಷದ ನಾಯಕರು, ಕಾರ್ಯಕರ್ತರ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಹೋಗಬೇಕು. ಬಿಜೆಪಿ ಕಟ್ಟಿ ಬೆಳೆಸಿದ ನಾಯಕರು ಬಿಟ್ಟು ಹೋಗಿರುವುದು ನೋವಿನ ಸಂಗತಿ ಎಂದು ಹೇಳಿದರು.