Advertisement
ಕಾಪು ಪುರಸಭೆ ವ್ಯಾಪ್ತಿಯ ಕಾಪು ಪೇಟೆ ಸಹಿತ ವಿವಿಧೆಡೆಗಳಲ್ಲಿ ಮತಯಾಚನೆ ನಡೆಸಿ, ಕಾಪು ಪೇಟೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಮತಗಳ ಮೂಲಕ ಉತ್ತರಿಸೋಣ : ಗುರ್ಮೆಕುತಂತ್ರದ ರಾಜಕಾರಣ ನಡೆಸುವುದರಲ್ಲಿ ಕಾಂಗ್ರೆಸಿಗರು ನಿಸ್ಸೀಮರು. ಕಾಂಗ್ರೆಸ್ ಪಕ್ಷ ನಮ್ಮನ್ನು ಎಷ್ಟು ತುಳಿಯುತ್ತದೆಯೋ ನಾವು ಅಷ್ಟು ಎತ್ತರಕ್ಕೆ ಬೆಳೆಯುತ್ತಿದ್ದೇವೆ. ನನಗೆ ಬಡತನವೇನೆಂದು ಗೊತ್ತಿದೆ. ಹಸಿವು ಏನೆಂದು ಗೊತ್ತಿದೆ. ಅವಮಾನ ಏನೆಂದು ಗೊತ್ತಿದೆ. ರಾಜಕೀಯಕ್ಕೆ ಬಂದು ಹಣ ಮಾಡಬೇಕಾದ ಅವಶ್ಯಕತೆಯಿಲ್ಲ. ಭಗವಂತನ ನನಗೇನು ಕೊಟ್ಟಿದ್ದಾನೋ ಅದರಲ್ಲಿ ಒಂದಿಷ್ಟನ್ನು ಸಮಾಜಕ್ಕೆ ಕೊಡುತ್ತಿದ್ದೇನೆ. ಚುನಾವಣಾ ಹಿನ್ನೆಲೆಯಲ್ಲಿ ಎದುರಾಳಿಗಳು ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದಾರೆ. ರಾಜಕೀಯವಾಗಿ ನಡೆಯುತ್ತಿರುವ ಷಡ್ಯಂತ್ರ, ಅಪಪ್ರಚಾರ ಮತ್ತು ಅಪಮಾನಗಳಿಗೆ ಮತರದಾರರು ತಮ್ಮ ಮತಗಳ ಮೂಲಕ ಸೂಕ್ತ ಉತ್ತರವನ್ನು ನೀಡುವಂತೆ ಅವರು ವಿನಂತಿಸಿದರು. ಮೋದಿ ಕೈ ಬಲಪಡಿಸುವ ಚುನಾವಣೆ : ಚುನಾವಣೆಯಲ್ಲಿನ ಗೆಲುವು ಗುರ್ಮೆ ಸುರೇಶ್ ಶೆಟ್ಟಿ ಅವರಿಗೆ ಮಾತ್ರ ಸೀಮಿತವಲ್ಲ. ಇಲ್ಲಿ ಧರ್ಮ ಗೆಲ್ಲಿದೆ, ಮೋದಿಯವರ ಸಂಕಲ್ಪ ಗೆಲ್ಲಬೇಕಿದೆ. ಬಿಜೆಪಿ ರಾಷ್ಟ್ರ ಧರ್ಮದ ಚಿಂತನೆಗಳು ಗೆಲ್ಲಬೇಕಿದೆ. ಇಲ್ಲಿ ನೀವು ನೀಡುವ ಪ್ರತೀ ಮತಗಳು ಪ್ರಧಾನಿ ಮೋದಿಯವರ ಕೈ ಬಲಪಡಿಸುತ್ತದೆ. ಭಾರವನ್ನು ವಿಶ್ವಗುರುವನ್ನಾಗಿ ಮಾಡುವ ಮೋದಿಯವರ ಕನಸನ್ನು ನನಸಾಗಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು. ಬಿಜೆಪಿ ಮುಖಂಡರಾದ ಶ್ರೀಕಾಂತ್ ನಾಯಕ್, ವೀಣಾ ಶೆಟ್ಟಿ, ಗೀತಾಂಜಲಿ ಸುವರ್ಣ, ನವೀನ್ ಎಸ್. ಕೆ., ವಿಜಯ್ ಕರ್ಕೆàರ, ಅನಿಲ್ ಕುಮಾರ್, ಸಂದೀಪ್ ಶೆಟ್ಟಿ, ರತ್ನಾಕರ ಶೆಟ್ಟಿ, ಹರಿಣಿ ದೇವಾಡಿಗ, ಗೋಪಾಲಕೃಷ್ಣ ರಾವ್, ಅನಿಲ್ ಶೆಟ್ಟಿ ಮಾಂಬೆಟ್ಟು, ಗೋಪ ಪೂಜಾರಿ, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಹಿರಿಯಡಕ ದೇವಸ್ಥಾನದ ವಿಚಾರದಲ್ಲಿ ಬಿಜೆಪಿಯನ್ನು ದೂಷಿಸಬೇಡಿ : ಕುಯಿಲಾಡಿ
ಹಿರಿಯಡಕ : ಹಿರಿಯಡಕ ವೀರಭದ್ರ ದೇವಸ್ಥಾನದ ವಿಚಾರವಾಗಿ ಕಾಂಗ್ರೆಸ್ ಪಕ್ಷ ಅನಗತ್ಯವಾಗಿ ಬಿಜೆಪಿಯ ಮೇಲೆ ಆರೋಪ ಹೊರಿಸುತ್ತಿದೆ. ಹಿರಿಯಡಕ, ಬೊಮ್ಮರಬೆಟ್ಟು ಪರಿಸರದಲ್ಲಿ ಸಾರ್ವಜನಿಕ ಪ್ರಚಾರ ಸಭೆಗಳಲ್ಲಿ ಬಿಜೆಪಿಯನ್ನು ದೂಷಿಸುತ್ತಿರುವುದನ್ನು ಖಂಡಿಸಿರಿವ ಅವರು, ಹಿರಿಯಡಕ ವೀರಭದ್ರ ದೇವಸ್ಥಾನದ ವಿಷಯದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು, ಶಾಸಕರು ಮತ್ತು ಸಚಿವರು ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ. ದೇವಸ್ಥಾನ ಮತ್ತು ಕುಟುಂಬದ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ರಿಮಾಂಡ್ ಆಗಿ, ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಕೈಯ್ಯಲ್ಲಿದೆ. ಚುನಾವಣೆ ಸಂದರ್ಭದಲ್ಲಿ ದೇವಸ್ಥಾನದ ಹೆಸರಿನಲ್ಲಿ ಬಿಜೆಪಿಯನ್ನು ಬೀದಿಗೆಳೆಯುವ ಅಗತ್ಯವಿಲ್ಲ. ಇದು ದೇವಸ್ಥಾನ, ಕುಟುಂಬ, ಕೋರ್ಟ್, ಸರಕಾರದ ವ್ಯವಸ್ಥೆಗೆ ಸೀಮೀತವಾದ ವಿಚಾರವಾಗಿದೆ. ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ನಡೆಸುತ್ತಿರುವ ಅಪಪ್ರಚಾರಕ್ಕೆ ಮತದಾರರೇ ಸೂಕ್ತ ಉತ್ತರ ಕೊಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.