Advertisement

ನಾನೂ ಭಾರತ ತಂಡದ ಕೋಚ್ ಆಗುವೆ: ಗಂಗೂಲಿ

01:49 AM Aug 04, 2019 | Team Udayavani |
ಕೋಲ್ಕತಾ: ಟೀಂ ಇಂಡಿಯಾಗೆ ಕೋಚ್ ನೇಮಕದ ಬಗ್ಗೆ ಮಾಜಿ ಕ್ರಿಕೆಟಿಗರು ಇದೀಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ನಾಯಕ ಸೌರವ್‌ ಗಂಗೂಲಿ ಕೂಡ ಈ ಬಗ್ಗೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಗುವ ಇಂಗಿತ ವ್ಯಕ್ತಪಡಿಸಿರುವ ಗಂಗೂಲಿ, ಇಂದಿಲ್ಲವಾದರೂ ಮುಂದೊಂದು ದಿನ ಖಂಡಿತವಾಗಿಯೂ ಟೀಂ ಇಂಡಿಯಾಗೆ ಕೋಚ್ ಆಗಬಯಸುತ್ತೇನೆ ಎಂದಿದ್ದಾರೆ.

Advertisement

ತಂಡಕ್ಕೆ ತರಬೇತಿ ನೀಡಲು ಉತ್ಸುಕನಾಗಿದ್ದೇನೆ, ಆದರೆ ಈ ಹಂತದಲ್ಲಿ ಅಲ್ಲ. ಮತ್ತೂಂದಷ್ಟು ಸಮಯ ಬೇಕಾಗಿದೆ, ಅನಂತರ ಕೋಚ್ ಹುದ್ದೆಗೆ ನಾನೇ ಅರ್ಜಿ ಹಾಕುತ್ತೇನೆ ಎಂದಿದ್ದಾರೆ ಗಂಗೂಲಿ.

ಈಗ ನಾನು ಐಪಿಎಲ್, ಸಿಎಬಿ ಹೀಗೆ ಹತ್ತು ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇದನ್ನು ಪೂರ್ಣಗೊಳಿಸಿ ನಂತರ ಕೋಚ್ ಹುದ್ದೆಗೆ ಪ್ರಯತ್ನಿಸುತ್ತೇನೆ ಎಂದು ಗಂಗೂಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next