Advertisement
ಕುಂದಗೋಳದ ಗಾಂಧಿ ವೃತ್ತದಲ್ಲಿ ನಡೆದ ಮೈತ್ರಿ ಅಭ್ಯರ್ಥಿ ಪರ ಪ್ರಚಾರಾರ್ಥ ಸಮಾವೇಶದಲ್ಲಿ ಮಾತನಾಡಿದ ಅವರು, ಕಡುಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಈ ಯೋಜನೆಯನ್ನು ನಿಮ್ಮಿಂದ ಆರಂಭಿಸುತ್ತೇವೆ. ಕ್ಷೇತ್ರದ ಅಭಿವೃದ್ಧಿಗೆ ಮೈತ್ರಿ ಸರಕಾರ ಇರುತ್ತದೆ. ಇಲ್ಲಿನ ಪ್ರಮುಖ ಬೇಡಿಕೆಯಾದ ಕುಡಿಯುವ ನೀರು, ಮೂಲ ಸೌಲಭ್ಯ ಸೇರಿದಂತೆ ಜ್ವಲಂತ ಸಮಸ್ಯೆಗಳಿಗೆ ಮೈತ್ರಿ ಸರಕಾರ ಪರಿಹಾರ ಕಲ್ಪಿಸಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಒಟ್ಟಾಗಿ ನಿಮ್ಮ ಸೇವೆ ಮಾಡುವುದಾಗಿ ಹೇಳಿದರು.
Related Articles
Advertisement
ಕಳಸಾ-ಬಂಡೂರಿ ವಿಚಾರದಲ್ಲಿ ಅಧಿಸೂಚನೆ ಹೊರಡಿಸದೆ ಕೇಂದ್ರ ಸರಕಾರ ಅನ್ಯಾಯ ಮಾಡಿದ್ದು, ಈ ಭಾಗದಲ್ಲಿ ಮತಯಾಚನೆಗೆ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಅಧಿಸೂಚನೆ ಹೊರಡಿಸಿದರೆ, ತಕ್ಷಣಕ್ಕೆ ಟೆಂಡರ್ ಕರೆಯಲು ತಾವು ಬದ್ಧ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹದಾಯಿ ನ್ಯಾಯಾಧೀಕರಣ ತೀರ್ಪು ನೀರು ಹಂಚಿಕೆ ಮಾಡಿದೆ. ಹಂಚಿಕೆಯಾದ ನೀರಿನ ಬಳಕೆಗೆ ಅಧಿಸೂಚನೆ ಹೊರಡಿಸಲು ಯಾವುದೇ ಅಡ್ಡಿ ಇಲ್ಲ. ಆದರೆ, ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸದೆ ಈ ಭಾಗಕ್ಕೆ ಅನ್ಯಾಯ ಮಾಡಿದೆ ಎಂದರು.
ನ್ಯಾಯಾಧೀಕರಣದ ತೀರ್ಪು ಕುರಿತಾಗಿ ನಮ್ಮ ಆಕ್ಷೇಪ ಸಲ್ಲಿಕೆಗೂ ಅಧಿಸೂಚನೆ ಹೊರಡಿಸುವುದಕ್ಕೂ ಸಂಬಂಧವಿಲ್ಲ. ಆಕ್ಷೇಪ ಸಲ್ಲಿಸಿದರೂ ಅಧಿಸೂಚನೆ ಹೊರಡಿಸಬಹುದಾಗಿದೆ. ರಾಜ್ಯ ಸರಕಾರ ಆಕ್ಷೇಪ ಸಲ್ಲಿಸಿದ್ದು, ಅಧಿಸೂಚನೆ ಹೊರಡಿಸಲು ಬರುವುದಿಲ್ಲ ಎಂದು ಬಿಜೆಪಿ ನಾಯಕರು ದಾರಿತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಅಧಿಸೂಚನೆ ಹೊರಡಿಸಲು ಏನು ಅಡ್ಡಿ ಇದೆ ಅವರು ಸ್ಪಷ್ಟಪಡಿಸಲಿ. ಜಲಸಂಪನ್ಮೂಲ ಸಚಿವನಾಗಿ ಅಗತ್ಯ ಮಾಹಿತಿಯೊಂದಿಗೆ ನಾನು ಮಾತನಾಡುತ್ತಿದ್ದೇನೆ ಎಂದು ಹೇಳಿದರು.
ಮಹದಾಯಿ ವಿಚಾರದಲ್ಲಿ ಮಧ್ಯಪ್ರವೇಶ ಹಾಗೂ ಸೌಹಾರ್ದ ಇತ್ಯರ್ಥಕ್ಕೆ ಪ್ರಧಾನಿ ಬಳಿ ನಿಯೋಗ ಹೋದರು ಪ್ರಯೋಜನವಾಗಲಿಲ್ಲ. ಇದೇ ಯಡಿಯೂರಪ್ಪ, ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ ಯಾರೊಬ್ಬರು ಪ್ರಧಾನಿ ಮುಂದೆ ಬಾಯಿ ತರೆಯಲಿಲ್ಲ. ಇಲ್ಲಿ ಬಂದು ರಾಜ್ಯ ಸರಕಾರದ ಮೇಲೆ ಆರೋಪ ಹೊರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದರೆ ತಕ್ಷಣವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ರಾಜ್ಯ ಸರಕಾರ ಸಿದ್ಧವಿದೆ ಎಂದರು.
ಪ್ರಧಾನಿ ಸ್ಪಷ್ಟಪಡಿಸಬೇಕು: ಗೋಡ್ಸೆಯನ್ನು ದೇಶಭಕ್ತ ಎಂದು ಕೆಲ ಬಿಜೆಪಿಯವರು ಕರೆದಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮೊದಲು ಸ್ಪಷ್ಟನೆ ನೀಡಬೇಕಾಗಿದೆ. ರಾಜೀವ್‌ಗಾಂಧಿ ಅವರ ಬಗ್ಗೆ ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರು ಭ್ರಷ್ಟಾಚಾರಿ, ಕೊಲೆಗಡುಕ ಎಂಬಂಥ ಹೇಳಿಕೆ ನೀಡುವುದು ನಾಚಿಕೆಗೇಡಿನ ಸಂಗತಿ. ಮೋದಿಯವರಿಗೆ ಸೋಲಿನ ಅರಿವಾಗಿ ಇಂತಹ ಹೇಳಿಕೆ ನೀಡಲು ಮುಂದಾಗಿದ್ದು, ಬಿಜೆಪಿಯವರ ಮನೋಸ್ಥಿತಿ, ಸಂಸ್ಕೃತಿ ಎಂತಹದ್ದೆಂಬುದು ವ್ಯಕ್ತವಾಗುತ್ತಿದೆ ಎಂದರು.